Monday, November 23, 2026

ಪ್ರಾಯೋಗಿಕ ಆವೃತ್ತಿ

ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯಾವಳಿ : ಮಂಡ್ಯ ಚಾಂಪಿಯನ್

ಹುಬ್ಬಳ್ಳಿ ನಗರದಲ್ಲಿ  ಭಾನುವಾರ ನಡೆದ 2025ನೇ ಸಾಲಿನ ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಡ್ಯ ವೈದ್ಯರ ತಂಡವು ವಿಜಯಶಾಲಿಯಾಗಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮಂಡ್ಯ ತಂಡವನ್ನು ಮಂಡ್ಯ ವೈದ್ಯಕೀಯ ಕಾಲೇಜಿನ ಡಾ. ಮೋಹನ್, ತ್ರಿನೇತ್ರ ಕಣ್ಣಿನ ಆಸ್ಪತ್ರೆಯ ಡಾ. ಅವಿನಾಶ್, ಡಾ.ಶಶಾಂಕ್, ಡಾ. ಭರತ್, ಡಾ.ವಿವೇಕ್, ಡಾ.ಸುನಿಲ್, ಡಾ.ಕಿರಣ್, ಡಾ.ತೇಜಸ್ವಿ, ಡಾ.ಪ್ರವೀಣ್, ಡಾ.ಕಾರ್ತಿಕ್, ಡಾ.ಶ್ರೀನಿಧಿ, ಡಾ.ನಕುಲ್, ಡಾ.ಕೀರ್ತಿ ಸಾಗರ್ ಹಾಗೂ ಡಾ. ಸಚಿನ್ ಪ್ರತಿನಿಧಿಸಿದ್ದರು.

ಪಂದ್ಯಾವಳಿಯಲ್ಲಿ ರಾಜ್ಯದಾದ್ಯಂತ ಒಟ್ಟು 32 ವೈದ್ಯರ ತಂಡಗಳು ಭಾಗವಹಿಸಿದ್ದವು. ವಿಜೇತ ಮಂಡ್ಯ ವೈದ್ಯರ ತಂಡಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಪಾರಿತೋಷಕ ಹಾಗೂ ಬಹುಮಾನ ವಿತರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ