Friday, November 20, 2026

ಪ್ರಾಯೋಗಿಕ ಆವೃತ್ತಿ

ಡಾ.ಅಂಬರೀಶ್ ಜನ್ಮದಿನ| ಮೇ 29ಕ್ಕೆ ಪ್ರತಿಭಾ ಪುರಸ್ಕಾರ- ಸಾಧಕರಿಗೆ ಗೌರವ ಸಮರ್ಪಣೆ

ಕನ್ನಡ ಚಿತ್ರರಂಗದ ಮೇರು ನಟ ರೆಬೆಲ್ ಸ್ಟಾರ್ ಡಾ.ಎಂ. ಹೆಚ್. ಅಂಬರೀಶ್ ಅವರ 72 ನೇ ಜನ್ಮ ಜಯಂತಿ ಪ್ರಯುಕ್ತ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸಂಸದೆ ಸುಮಲತಾ ಅಂಬರೀಶ್ ಅವರಿಂದ ಸ್ಥಾಪಿತವಾದ ಡಾ.ಅಂಬರೀಶ್ ಫೌಂಡೇಶನ್ ಸಹಕಾರದೊಂದಿಗೆ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘಾ ಸಂಯಕ್ತ ಆಶ್ರಯದಲ್ಲಿ ಮೇ.29 ರಂದು ಮಂಡ್ಯದ ರೈತ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು‌.

ಹಿರಿಯ ಸಾಹಿತಿ, ಸಾಂಸ್ಕೃತಿಕ ಚಿಂತಕ ಪಿಇಎಸ್ ಕಾಲೇಜಿನ ಪ್ರಾಧ್ಯಾಪಕ ಎಸ್.ಬಿ. ಶಂಕರಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಭಿನಂದನಾ ನುಡಿಗಳನ್ನಾಡಲಿದ್ದು, ಸಂಸದೆ ಸುಮಲತಾ ಅಂಬರೀಷ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂಬರೀಶ್ ರವರ ಸುಪುತ್ರ ಅಭಿಷೇಕ್ ಅಂಬರೀಶ್ ಭಾಗವಹಿಸಲಿದ್ದಾರೆ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಾದ ಖ್ಯಾತ ಪಶು ವೈದ್ಯ ಡಾ.ಕೆ.ಎಸ್. ಜಯರಾಮ್, ಸಾವಯವ ಕೃಷಿಕ ಮಂಡ್ಯ ತಾಲ್ಲೂಕಿನ ಕೆ ಗೌಡಗೆರೆ ಗ್ರಾಮದ ರಂಗಶೆಟ್ಟಿ, ಶಿಕ್ಷಣ ಕ್ಷೇತ್ರದ ಸಾಧಕ ನಂಜರಾಜು ಹಾಗೂ ಸಾಂಪ್ರದಾಯಿಕ ಗಾಮೀಣ ಉತ್ಸವಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾಮದ ಶ್ರೀ ಕಾಲ ಭೈರವೇಶ್ವರ ಜಾತ್ರಾ ಮಹೋತ್ಸವ ಸಮಿತಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಕಾರಿನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಬೊಮ್ಮನಹಳ್ಳಿ ಗ್ರಾಮದ ಯುವಕ ಕಾರ್ತಿಕ್ ರವರ ತಂದೆ-ತಾಯಿಗೆ ಸಾಂತ್ವನ ಹೇಳುವ ಕಾರ್ಯಕ್ರಮ ದೊಂದಿಗೆ ಅವರ ಸಹೋದರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ,ಜಿಲ್ಲೆಗೆ ಮೊದಲನೇ ಸ್ಥಾನ ಪಡೆದ ತುಂಬಕೆರೆ ಸರ್ಕಾರಿ ವಸತಿ ಶಾಲೆಯ ಕನ್ನಲಿ ಗ್ರಾಮದ ವಿದ್ಯಾರ್ಥಿ ನವನೀತ್,2ನೇ ಸ್ಥಾನ ಪಡೆದ ಮಳವಳ್ಳಿ ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿ ವಿನಯ್,3ನೇ ಸ್ಥಾನ ಪಡೆದ ಮದ್ದೂರಿನ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿಗಳಾದ ಖುಷಿ ಮತ್ತು ಗಗನ್ ಗೌಡ ಸೇರಿದಂತೆ 4 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಗುವುದು ಎಂದರು.

ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕೆ. ಆರ್. ಪೇಟೆಯ ಕೆ.ವಿ. ಆರ್ ಸಂಯುಕ್ತ ಪಿಯು ಕಾಲೇಜಿನ ಮಾರ್ಕೋನಹಳ್ಳಿ ಗ್ರಾಮದ ಕಾವ್ಯ, ಎರಡನೇ ಮತ್ತು ಮೂರನೇ ಸ್ಥಾನ ಪಡೆದ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದ ಸಿದ್ದಗಂಗಾ ಸ್ವಾಮಿ ಕಾಲೇಜಿನ ವಿದ್ಯಾರ್ಥಿಗಳಾದ ಮಾದೇಶ.ವಿ. ಮತ್ತು ರಕ್ಷಿತ.ಡಿ.ರವರಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ಎಸ್ ಟಿ ಜಿ ಕಾಲೇಜಿನ ವಿದ್ಯಾರ್ಥಿಗಳಾದ ಬಿ.ಆರ್.ಪ್ರಗತಿ,ಬಿ.ಎಸ್. ಜೀವನ್ ಗೌಡ ಮತ್ತು ಮೂರನೇ ಸ್ಥಾನ ಪಡೆದ ಮಾಂಡವ್ಯ ಎಕ್ಸಲೆನ್ಸ್ ಕಾಲೇಜಿನ ಎಸ್.ಸಾನ್ವಿ ಶೆಟ್ಟಿ,ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಾಂಥೋಮ್ ಪಿಯು ಕಾಲೇಜಿನ ಎಂ.ಎಸ್. ಗುರುಕಿರಣ್, ಸದ್ವಿದ್ಯಾ ಪಿಯು ಕಾಲೇಜಿನ ಆಯುಷ್ .ಡಿ, ಮೂರನೇ ಸ್ಥಾನ ಪಡೆದ ಕಾರ್ಮೆಲ್ ಕಾಲೇಜಿನ ಪಲ್ಲವಿ. ಆರ್. ಹೀಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.

ಅಂಬರೀಶ್ ಅಭಿಮಾನಿಗಳ ಸಂಘದ ಸದಸ್ಯರಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಹಕಾರ ಕ್ಷೇತ್ರದ ಬಿ.ಎಲ್. ಬೋರೇಗೌಡ, ಇತ್ತೀಚಿಗೆ ದೇಶಾದ್ಯಂತ ಯಶಸ್ವಿ ಪ್ರದರ್ಶನ ನೀಡಿದ ಕಾಟೇರ ಚಲನಚಿತ್ರಕ್ಕೆ ರೈತ ಗೀತೆ ಬರೆದ ಮಂಡ್ಯದ ಮಗ ಪುನೀತ್ ಆರ್ಯರವರಿಗೆ ಹಾಗೂ ಗ್ರಾಮೀಣ ರೈತರ ಮುಖಂಡ,ಸಮಾಜ ಸೇವಕ ಕನ್ನಲಿ ಗ್ರಾಮದ ಮಲ್ಲರಾಜು ರವರನ್ನು ಅಭಿನಂದಿಸಲಾಗುವುದು. ಅಂಬರೀಶ್ ಅಭಿಮಾನಿ ಸಂಘದ ಸದಸ್ಯರ ಕುಟುಂಬದ ಇಬ್ಬರು ವಿದ್ಯಾರ್ಥಿಗಳಾದ ಎಂ.ಪ್ರೀತಮ್ ಶಿವಾರ, ರೋಷಿಣಿ ಸಿ.ಎಸ್. ಚಿಂದಗಿರಿದೊಡ್ಡಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಈ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ಜಿಲ್ಲೆಯಾದ್ಯಂತ ಇರುವ ಅಂಬರೀಶ್ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಶುಭ ಹಾರೈಸಬೇಕೆ‌ಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಹನಕೆರೆ ಶಶಿಕುಮಾರ್, ಹನಿಯಂಬಾಡಿ ಸತೀಶ್, ಶ್ರೀನಿವಾಸ್, ಅರುಣಕುಮಾರಿ, ಮಧುಶಿವಲಿಂಗಯ್ಯ, ಮಹೇಶ್, ಉಪ್ಪಿನಕೆರೆ ಪ್ರಸನ್ನ ಹಾಗೂ ಕೋಣಸಾಲೆ ಜಯರಾಂ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ