Saturday, October 19, 2024

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಕ್ಷೇತ್ರದ ಗಣ್ಯರೇ ಸಮ್ಮೇಳಾಧ್ಯಕ್ಷರಾಗುವುದು ಸೂಕ್ತ : ಡಾ.ಬೋರೇಗೌಡ ಚಿಕ್ಕಮರಳಿ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳು, ಸಾಹಿತ್ಯ ಕ್ಷೇತ್ರದ ಗಣ್ಯರೇ ಸಮ್ಮೇಳನಾಧ್ಯಕ್ಷರಾಗಬೇಕು, ಸಾಹಿತ್ಯೇತರರ ಆಯ್ಕೆಗೆ ನನ್ನ ವಿರೋಧವಿದೆ. ಮಂಡ್ಯ ಜಿಲ್ಲೆಯ ಒಳಗಿನವರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿಸುವ ನಿಟ್ಟಿನಲ್ಲಿ ಹಲವು ಹೆಸರುಗಳನ್ನು ಸೂಚಿಸಿದ್ದು, ನಮ್ಮಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದ ಮಾತ್ರಕ್ಕೆ ನಮ್ಮವರೇ ಸಮ್ಮೇಳನಾಧ್ಯಕ್ಷರಾಗಬೇಕೆಂಬುದು ಅಸಮಂಜಸ ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಡಾ.ಬೋರೇಗೌಡ ಚಿಕ್ಕಮರಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರದ ಸಾಹಿತ್ಯ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಠಾಧೀಶರು, ರಾಜಕೀಯ ವ್ಯಕ್ತಿಗಳು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರೆ ಅಂತವರು ಜನಪ್ರತಿನಿಧಿಗಳಾದರೂ ಸರಿಯೇ ಅಭ್ಯಂತರವಿಲ್ಲ. ತಮ್ಮ ಜೀವಮಾನವನ್ನೇ ಸಾಹಿತ್ಯ ಕ್ಷೇತ್ರಕ್ಕೆ ಮುಡುಪಿಟ್ಟವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದು ಸೂಕ್ತವಾದುದು ಎಂದು ಹೇಳಿದರು.

ರಚನಾತ್ಮಕ ಕಾರ್ಯಗಳಿಗೆ ಮುಂದಾಗಲಿ

ಸಮ್ಮೇಳನಕ್ಕೆ ಕೋಟ್ಯಾಂತರ ರೂ ಹಣ ವ್ಯಯಿಸುವ ಬದಲಿಗೆ, ಸಾಹಿತ್ಯವನ್ನು ಅಭಿವೃದ್ಧಿ ಪಡಿಸುವ, ನಾಡು ನುಡಿಗೆ ಏಳಿಗೆಯ ಕಾರ್ಯಕ್ರಮ ರೂಪಿಸುವ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದರು.

ಕೋಟ್ಯಾಂತರ ರೂ ವ್ಯಯಿಸುವ ಬದಲಿಗೆ ಕನ್ನಡಕ್ಕೆ ವಿಶಿಷ್ಠ ಕೊಡುಗೆ ನೀಡಿ ಸಾಧನೆ ಮಾಡಿದ ಹಿರಿಯ ಮುತ್ಸದ್ದಿ ಲೇಖಕರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಇರಿಸಿ ಅವರ ಸಾಕ್ಷಿಯಲ್ಲಿ ಪ್ರಚಲಿತ ವಿದ್ಯಮಾನಗಳನ್ನೊಳಗೊಂಡ ರಚನಾತ್ಮಕ ಚರ್ಚೆಗಳಾಗಿ ಸಾಹಿತ್ಯದ ಮುನ್ನಡೆಗೆ ಮಾರ್ಗಸೂಚಿಸಿ ಮೂಡಿಸುವ ಚರ್ಚಾಗೋಷ್ಠಿ ನಡೆಸಲಿ ಎಂಬುದೇ ನನ್ನ ಉದ್ದೇಶ ಎಂದು ಹೇಳಿದರು.

ಸಾಹಿತ್ಯಾಸಕ್ತರನ್ನು, ವಿದ್ಯಾರ್ಥಿಗಳನ್ನು ಸಮ್ಮೇಳನಕ್ಕೆ ಕರೆತರಬೇಕು, ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗಾಗಿಯೇ ಒಂದು ವಿಭಾಗವನ್ನು ಸೃಷ್ಠಿಸಿ, ಅವರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಕೆಲಸ ಮಾಡಬೇಕು. ಅವರಿಗಾಗಿಯೇ ಗೋಷ್ಠಿಗಳು, ಪ್ರಶ್ನೋತ್ತರ ವಿಭಾಗ ಸೃಷ್ಠಿಸಬೇಕು. ಇದರಿಂದ ಅವರಿಗೆ ಸಾಹಿತ್ಯದ ಅಭಿರುಚಿ ಹೆಚ್ಚಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಸ್ಮರಣ ಸಂಚಿಕೆಯಲ್ಲಿ ಮುಖ್ಯವಾಗಿ ಐದು ಭಾಗಗಳನ್ನು ರೂಪಿಸಿಕೊಳ್ಳಲಾಗಿದ್ದು, ಮೊದಲನೆಯದಾಗಿ ಮಂಡ್ಯ ಪರಿಚಯಿಸುವ ದಿಕ್ಕಿನಲ್ಲಿ ಮಧುರ ಮಂಡ್ಯ ಎಂಬ ಭಾಗದಲ್ಲಿ ಇಲ್ಲಿನ ಸಾಹಿತ್ಯ, ಕೃಷಿ, ಆರೋಗ್ಯ ಇತ್ಯಾದಿಗಳ ಸಾಕ್ಷರತಾ ಆಂದೋಲನ, ಕೋವಿಡ್ ಸಂದರ್ಭದ ಸಮಸ್ಯೆಗಳು ಸೇರಿದಂತೆ ಹಲವು ಲೇಖನಗಳು, ಎರಡನೆಯದಾಗಿ ಕರ್ನಾಟಕ ಭಾರತ ಭಾಗದಲ್ಲಿ ರಾಜ್ಯದ ಸಾಹಿತ್ಯಿಕ ವಿದ್ಯಮಾನ, ಸಾಧನೆಗಳು, ಅಭಿವೃದ್ಧಿ ಸಂಬಂಧ ಲೇಖನಗಳು, ಮೂರನೇದಾಗಿ ವಿಶ್ವ ಕರ್ನಾಟಕ ಎಂಬ ಭಾಗದಲ್ಲಿ ಕರ್ನಾಟಕದ ಹೊರಭಾಗದ ಅನಿವಾಸಿ ಕನ್ನಡಿಗರ ಸಾಧನೆಗಳ, ಹೋರಾಟಗಳ ಪರಿಚಯ ಲೇಖನಗಳು, ನಾಲ್ಕನೆಯದಾಗಿ ಅಭಿವೃದ್ಧಿ ಭಾರತ ಎಂಬ ಭಾಗದಡಿ ದೇಶ ವಿದೇಶಗಳಲ್ಲಿ ಕನ್ನಡಗರಿಂದಾದ ಅಭಿವೃದ್ಧಿ ಕಾರ್ಯಗಳ ಹಾಗೂ ಅವುಗಳ ಇತಿ ಮಿತಿಗಳ ಸಂಬಂಧ ಲೇಖನಗಳು, ಐದನೇಯದಾಗಿ ಚಿತ್ರ ಸಂಪುಟ ಭಾಗದಲಿ ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಮಹತ್ವ ತಿಳಿಸುವ ಘಟನಾವಗಳಿಗೆ ಸಂಬಂಧಿಸಿದ ಭಾವಚಿತ್ರಗಳ ಸಂಗ್ರಹದ ಸಂಚಿಕೆ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಸಾಹಿತಿ ಕೃಷ್ಣ ಸ್ವರ್ಣಸಂದ್ರ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!