ಹೆಚ್.ಡಿ.ಚೌಡಯ್ಯ ಟ್ರಸ್ಟ್ ವತಿಯಿಂದ ಡಾ.ಹೆಚ್.ಡಿ.ಚೌಡಯ್ಯ ಅವರ 98ನೇ ಜನ್ಮದಿನಾಚರಣೆ, 2025ನೇ ಸಾಲಿನ ರಾಜ್ಯ ಮಟ್ಟದ ಶಿಕ್ಷಣ, ಸಹಕಾರ ಮತ್ತು ಕ್ರೀಡಾ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸೆ.25ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ಪಿಇಎಸ್ ಕಾಲೇಜಿನ ನಿತ್ಯ ಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪಿಇಟಿ ನಿರ್ದೇಶಕ ರಾಮಲಿಂಗಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ ಅಧ್ಯಕ್ಷತೆಯ ಕಾರ್ಯಕ್ರಮವನ್ನು ಉಪಾಧ್ಯಕ್ಷ ಎಂ.ಬಿ.ಶ್ರೀಧರ್ ಉದ್ಘಾಟಿಸುವರು. ಮೈಸೂರು ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರಂಗಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದು, ಟ್ರಸ್ಟ್ನ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಹಾಗೂ ಪಿಇಟಿ ಧರ್ಮದರ್ಶಿ ಹೆಚ್.ಸಿ.ಮೋಹನ್‌ಕುಮಾರ್ ಉಪಸ್ಥಿತರಿರಲಿದ್ದಾರೆ ಎಂದರು.
2025ರ ಡಾ.ಹೆಚ.ಡಿ.ಚೌಡಯ್ಯ ಶಿಕ್ಷಣ ಪ್ರಶಸ್ತಿಯನ್ನು ಎಂ.ಎಕ.ರಾಮಸ್ವಾಮಿ, ಸಹಕಾರ ಪ್ರಶಸ್ತಿಯನ್ನು ಮಂಡ್ಯ ಜಿಲ್ಲಾಸಹಕಾರ ಕೇಂದ್ರ ಬ್ಯಾಂಕ್ (ಎಂಡಿಸಿಸಿ), ಕ್ರೀಡಾ ಪ್ರಶಸ್ತಿಗೆ ವಿಲ್ಪ್ರೆಡ್ ಡಿಸೋಜ ಅವರಿಗೆ ತಲಾ 20 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಹೊಳಲು ಸರ್ಕಾರಿ ಪ್ರೌಢ ಶಾಲೆಯ ಹೆಚ್.ಪಿ.ಲಿಖಿತ್, ಹೆಚ್.ಎಂ ಪ್ರಜ್ವಲ್, ಹೆಚ್.ಸಿ.ಚೇತನ್‌ಗೌಡ, ಅಭಿನವ ಭಾರತಿ ಶಾಲೆಯ ಕೆ.ಎಸ್.ಪುಣ್ಯಶ್ರೀಗೆ ಅವರಿಗೆ ತಲಾ 5 ಸಾವಿರ ನಗದಿನೊಂದಿಗೆ ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ನೀಡಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಇದ್ದರು.




