Friday, November 20, 2026

ಪ್ರಾಯೋಗಿಕ ಆವೃತ್ತಿ

ಪಾರದರ್ಶಕ ಚುನಾವಣೆಗೆ ಕ್ರಮ | ₹ 56.61 ಲಕ್ಷ ಮೌಲ್ಯದ ನಗದು-ವಸ್ತುಗಳ ವಶ : ಡಾ.ಹೆಚ್.ಎನ್. ಗೋಪಾಲಕೃ‍ಷ್ಣ

ಮಂಡ್ಯ ಜಿಲ್ಲಾದ್ಯಂತ 7 ವಿಧಾನಸಭಾ ಕ್ಷೇತ್ರಗಳ ಚುನಾವಣೆಗಳನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಇದುವರೆಗೆ ಜಿಲ್ಲಾದ್ಯಂತ ₹ 56,61,970 ಮೌಲ್ಯದ ನಗದು ಹಾಗೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಘೋಷಣೆಯ ಪೂರ್ವದಲ್ಲಿ ₹45,03,240 ನಗದು, 1009.933 ಲೀಟರ್ ಮದ್ಯ (ಇದರ ಮೌಲ್ಯ ₹3,95,392) ಸೇರಿದಂತೆ ಇನ್ನಿತರೆ: 4,988 ಪದಾರ್ಥಗಳ (ಮೌಲ್ಯ ₹1,05,75,200)ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.  ಚುನಾವಣೆ ಘೋಷಣೆಯಾದ ನಂತರ ₹ 4,99,000 ನಗದು, 9562.240 ಲೀಟರ್ ಮದ್ಯ (ಇದರ ಮೌಲ್ಯ 34.58,564), 0.555  ರೂ. ಮೌಲ್ಯದ ಡ್ರಗ್ಸ್, ಇನ್ನಿತರೆ ಪದಾರ್ಥಗಳು ಸೇರಿ ಒಟ್ಟು ₹56,61,970 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ತರಬೇತಿ
ಕಳೆದ ಮಾ.30ರಂದು ಮಂಡ್ಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಮಟ್ಟದ ಅಧಿಕಾರಿಗಗಳಿಗೆ ತರಬೇತಿ ನೀಡಿ, 80ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನ ಮತದಾರರಿಗೆ ಅಂಚೆ ಮೂಲಕ ಚಲಾಯಿಸಲು ನಮೂನೆ-12ಡಿ ಅನ್ನು ನಮೂನೆಗಳನ್ನು ವಿತರಣೆ ಮಾಡುವ ಬಗ್ಗೆ ತಿಳಿಸಿ ಕೊಡಲಾಗಿದೆ ಎಂದರು.

ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ 12ಡಿ ನಮೂನೆಯನ್ನು ವಿರಮಾಡಲಾಗುತ್ತಿದ್ದು, ಇಲ್ಲಿಯವ 7912 12ಡಿ ನಮೂನೆಯನ್ನು ವಿತರಣೆ ಮಾಡಲಾಗಿದೆ. ಮತಗಟ್ಟೆ ಬರಲು ಅಶಕ್ತರಾದ ಮತದಾರರ ತಮಮ್ ವ್ಯಾಪ್ತಿ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ ಎಂದರು.

ವಿದ್ಯುನ್ಮಾನ ಮತಯಂತ್ರಗಳ ವಿತರಣೆ
ಮಾ.30ರಂದು ಪ್ರಥಮ ಹಂತದ ರ್‍ಯಾಂಡಮೈಸೇಷನ್ ಕಾರ್ಯದ ನಂತರ, ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ವಿತರಿಸಲಾಗಿದೆ. ಮೀಸಲು, ತರಬೇತಿ ಹಾಗೂ ಮತದಾರರಲ್ಲಿ ಅರಿವು ಮೂಡಿಸಲು ನೀಡಲಾಗಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು ಮಂಡ್ಯ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣದಲ್ಲಿ ದಾಸ್ತಾನು ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 34 ಚೆಕ್ ಪೋಸ್ಟ್ ಗಳು

ಜಿಲ್ಲೆಯಲ್ಲಿ ಒಟ್ಟು 34 ಚೆಕ್ ಪೋಸ್ಟ್ ಗಳನ್ನು ತೆರೆಯಲಲಾಗಿದ್ದು, ಅನಧಿಕೃತ ಹಣ ಮತ್ತು ಇನ್ನಿತರೆ ಆಮಿಷ ಒಡ್ಡುವಂತಹ ವಸ್ತುಗಳ ಸಾಗಾಣಿಕೆ ಬಗ್ಗೆ ನಿಗಾ ವಹಿಸಲಾಗಿದೆ. ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದರು.

66,981 ಯುವ ಮತದಾರರಿಗೆ
ಜಿಲ್ಲೆಯಲ್ಲಿ 15-10-2022ರ ನಂತರ ಹೊಸದಾಗಿ 66,981 ಯುವ ಮತದಾರರು ಸೇರ್ಪಡೆಯಾಗಿದ್ದು, ಇವರಿಗೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಒದಗಿಸಬೇಕಾಗಿದ್ದು, ಈ ಪೈಕಿ 21,033 ಗುರುತಿನ ಚೀಟಿಸರಬರಾಜಾಗಿದ್ದು, ಗುರುತಿನ ಚೀಟಿಯನ್ನು ಅಂಚೆ ಮೂಲಕ ವಿತರಿಸಲು ಕ್ರಮವಹಿಸಲಾಗಿದೆ.  ವಿಳಂಬವಾದ ಮತದಾರರು ತಮ್ಮ ವ್ಯಾಪ್ತಿಯ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಎಸ್ಪಿ ಎನ್.ಯತೀಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ