ಮಳವಳ್ಳಿಯಲ್ಲಿ ಕೆ.ಆರ್.ಎಸ್ ಪಕ್ಷದ ವತಿಯಿಂದ ದಕ್ಷ, ಪ್ರಾಮಾಣಿಕ ಐಪಿಎಸ್ ಅಧಿಕಾರಿಯಾಗಿದ್ದ ಡಾ.ಕೆ ಮಧುಕರ್ ಶೆಟ್ಟಿ ಅವರ ಪುಣ್ಯ ಸ್ಮರಣೆ ಮಾಡಲಾಯಿತು.
ಡಾ.ಕೆ ಮಧುಕರ್ ಶೆಟ್ಟಿ ಅವರು ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿ, ತಮ್ಮ ಜೀವಿತಾವಧಿಯಲ್ಲಿ ಒಂದು ರೂಪಾಯಿ ಲಂಚ ತೆಗೆದುಕೊಳ್ಳದೆ ಭ್ರಷ್ಟಾಚಾರದ ವಿರುದ್ಧ ಹೋರಾಡಿದರು. ಸ್ವತಃ ಇಲಾಖೆಯಲ್ಲಿ ಯಾರಾದರೂ ತಪ್ಪು ಮಾಡಿದರೆ ಯಾವುದೇ ರೀತಿ ಅವರಿಗೆ ಸಹಕಾರ ನೀಡದೆ ಶಿಕ್ಷೆಗೆ ಒಳಪಡಿಸುತ್ತಿದ್ದರು. ಮುಖ್ಯವಾಗಿ, ವೈ ಸಂಪಂಗಿ ಎಂಬ ಭ್ರಷ್ಟ ಶಾಸಕನನ್ನು ಸದನದಲ್ಲೇ ಅರೆಸ್ಟ್ ಮಾಡಿದ್ದರು, ಅಲ್ಲದೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ಜನಾರ್ಧನ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ಆದಂತಹ ಯಡಿಯೂರಪ್ಪ ಡಿ ನೋಟಿಫಿಕೇಶನ್ ಹಗರಣದಲ್ಲಿರುವಾಗ, ನೇರವಾಗಿ ಅರೆಸ್ಟ್ ಮಾಡಿದಂತಹ ಒಬ್ಬ ಪ್ರಮಾಣಿಕ ಅಧಿಕಾರಿಯಾಗಿದ್ದರು ಎಂದು ಸ್ಮರಿಸಲಾಯಿತು.
ಪುಣ್ಯ ಸ್ಮರಣೆಯ ನೆನಪಿಗಾಗಿ ಮಳವಳ್ಳಿ ಪೋಲೀಸ್ ಠಾಣೆಗೆ ಭೇಟಿ ನೀಡಿ ಅವರ ಭಾವಚಿತ್ರ ಜೊತೆ ಮನವಿ ಪತ್ರ ನೀಡಿ ಅವರಂತೆ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುವಂತೆ ಸಿಬ್ಬಂದಿಗಳಿಗೆ ಪ್ರೇರೇಪಿಸಲಾಯಿತು.
ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಮಳವಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಮಾದೇಗೌಡ ಎ ಎನ್, ಉಪಾಧ್ಯಕ್ಷ ಪರಮೇಶ ಸಿ , ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ ಹೆಚ್ ಎಮ್, ಕಾರ್ಯದರ್ಶಿ ರಾವಣಿ ಮೂರ್ತಿ ಆರ್ ಟಿ, ಮಳವಳ್ಳಿಯ ಸತೀಶ್ ಎಮ್ ಎಸ್, ಹರೀಶ್, ಪೂರಿಗಾಲಿಯ ಸಿದ್ದರಾಜು, ಮಂಡ್ಯ ಜಿಲ್ಲಾ ಎಸ್ ಸಿ ಎಸ್ ಟಿ ಘಟಕದ ಉಪಾಧ್ಯಕ್ಷ ಶಿವಮೂರ್ತಿ ಮತ್ತು ಇತರರು ಭಾಗಿಯಾಗಿದ್ದರು.




