ದೇಶ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ಆರ್ಥಿಕ ತಜ್ಞ, ಸುಧಾರಕ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ಆಘಾತ ಉಂಟು ಮಾಡಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಹಣಕಾಸು ಸಚಿವರಾಗಿ ಹಾಗೂ ಹಾಗೂ 10 ವರ್ಷಗಳ ಕಾಲ ಪ್ರಧಾನಿಯಾಗಿ ಅವರು ಜಾರಿಗೆ
ತಂದ ಉದಾರೀಕರಣ ಸೇರಿದಂತೆ ಹಲವು ಆರ್ಥಿಕ ಸುಧಾರಣಾ ಕ್ರಮಗಳು ಇಂದಿಗೂ ದೇಶದ ಹಣಕಾಸಿನ
ಸದೃಢತೆಗೆ ನೆರವಾಗಿವೆ. ಜೊತೆಗೆ ಜಾಗತಿಕ ಮನ್ನಣೆಗೆ ಪಾತ್ರವಾಗಿವೆ. ಭಾರತದ ಆರ್ಥಿಕ ಇತಿಹಾಸದಲ್ಲಿ ಡಾ ಮನ್ ಮೋಹನ್ ಸಿಂಗ್ ಅವರ ಹೆಸರು ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಅವರು ಸ್ಮರಿಸಿದ್ದಾರೆ.
ವಿದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅಲ್ಲಿನ ಬ್ಯಾಂಕ್ ಗಳು ಮುಚ್ಚುತ್ತಿದ್ದಾಗ ನಮ್ಮ ದೇಶದ ಬ್ಯಾಂಕುಗಳು ಸಶಕ್ತವಾಗುತ್ತಾ ಸಾಗಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು ಸ್ಮರಣೀಯ. ಅತ್ಯಂತ ಮಿತ ಭಾಷಿಯಾದರೂ ಕ್ಷಿಷ್ಟ ಸಂದರ್ಭದಲ್ಲಿ ವಿಚಲಿತರಾಗದೆ ಸ್ಪಷ್ಟ, ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಹೊಂದಿದ್ದ ಮನಮೋಹನ್ ಸಿಂಗ್ ಅವರು ದಕ್ಷ ಆಡಳಿತಗಾರರೂ ಆಗಿದ್ದರು.
ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದಿದ್ದಾರೆ.
ಎರೆಡು ಬಾರಿ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ಅನುಸರಿಸಿದ ವಿದೇಶಾಂಗ ನೀತಿ, ದಿಟ್ಟ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಭಾರತದ ಇಮೇಜು ಬದಲಿಸಲು ಹಾದಿ ಮಾಡಿಕೊಟ್ಟಿದೆ. ಭಾರತ ಇಂದು ಒಂದು ಬಲಿಷ್ಟ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಮಾಜಿ ಪ್ರಧಾನಿ ಮೋಹನ್ ಸಿಂಗ್ ಅವರ ಪಾತ್ರ ಅಪಾರ, ಕೇವಲ ಆರ್ಥಿಕ ತಜ್ಞ ಮಾತ್ರವಲ್ಲದೆ ,ಬೋಧಕರಾಗಿ , ಸಚಿವಾಲಯದ ಅಧಿಕಾರಿಯಾಗಿಯೂ ಮೆಚ್ಚುಗೆಗೆ ಪಾತ್ರವಾಗಿದ್ದ ಮನ ಮೋಹನ್ ಸಿಂಗ್ 30 ವರ್ಷಗಳ ಕಾಲ ರಾಜ್ಯ ಸಭೆ ಸದಸ್ಯರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಡಾ. ಮನ ಮೋಹನ್ ಸಿಂಗ್ ಅವರ ಆತ್ಮಕ್ಕೆ ಸದ್ಗತಿ ಸಿಗಲಿ , ಕುಟುಂಬಕ್ಕೆ, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಎನ್.ಚಲುವರಾಯಸ್ವಾಮಿ
ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.




