Saturday, October 19, 2024

ಪ್ರಾಯೋಗಿಕ ಆವೃತ್ತಿ

ವಿಶ್ವದ ನಿಗೂಢತೆಯ ಅರಿವು ಉಂಟು ಮಾಡುವುದು ಕಾವ್ಯ- ಡಾ.ಮೀರಾಶಿವಲಿಂಗಯ್ಯ

ಜೀವನದ ಮಹತ್ವ, ವಿಶ್ವದ ನಿಗೂಢತೆಯ ಅರಿವನ್ನ ಉಂಟು ಮಾಡುವುದು ಕಾವ್ಯವಾಗಿದೆ. ಸಾಹಿತ್ಯದ ಅಸ್ತಿತ್ವ ಹಾಗೂ ಮೂಲಗುಣ ಕಾವ್ಯದಲ್ಲಿ ಅಡಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಡಾ. ಮೀರಾಶಿವಲಿಂಗಯ್ಯ  ತಿಳಿಸಿದರು.

ಶ್ರೀರಂಗಪಟ್ಟಣ ದಸರಾ ಅಂಗವಾಗಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಶ್ರೀ ರಂಗವೇದಿಕೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ದಸರಾ ಮಹೋತ್ಸವದ ಈ ಸಂದರ್ಭದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಎನ್ನುವುದು ಒಂದು ಸೃಜನಶೀಲತೆ, ದೇಶಿಯ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಜಾಗೃತಿಗೊಳಿಸುವಂತಹ ಮಹಾ ಚೇತನ ಶಕ್ತಿಯಾಗಿದೆ ಎಂದರು.

ಕವಿ ತನ್ನ ಕಾವ್ಯದಲ್ಲಿ ಒಂದು ಗಾಢ ಅನುಭೂತಿಯನ್ನು ಬರೆದಿರುತ್ತಾರೆ. ಸಾಮಾನ್ಯವಾದ ಸರಳ ಚಿತ್ರ, ವಿಶೇಷ ಘಟನೆಗಳನ್ನು ಮಾತೃಭಾಷೆಯಲ್ಲಿ ಹೊರಗೆ ಬಂದಾಗ ಮಾತ್ರ ಕವಿಯ ಕವ್ಯ ರಚನೆ ಅಮೋಘವಾಗಿರುತ್ತದೆ. ಮಾತೃಭಾಷೆಗೆ ವಿಶೇಷ ಶಕ್ತಿ ಇದೆ ಎಂದರು.

ವಿಧವಿಧವಾದ ಅನುಭವಗಳನ್ನು ಜನಮನಕ್ಕೆ ಅಂತರಂಗ ಮಿಡಿಯುವ ರೀತಿ ಮಾಡುವ ಶಕ್ತಿ ಕವನ ಸಂಕಲನಗಳಿಗಿವೆ. ಕವಿತೆಯಲ್ಲಿ ಕವಿ ಅತ್ಯಂತ ವೈಯಕ್ತಿಕವಾದದ್ದನ್ನು ಸಾರ್ವತ್ರಿಕಗೊಳಿಸುವ ಶಕ್ತಿ ಇರುತ್ತದೆ. ಮಕ್ಜಳು ಕವಿಯಾಗಬೇಕಾದರೆ ಕನ್ನಡದ ಓದು, ಆಳವಾದ ಧ್ಯಾನ ಬಹಳ ಅವಶ್ಯಕವಾಗಿದೆ ಎಂದರು.

ಸಮಾಜದಲ್ಲಿ ಕವಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು

ಈ ನೆಲದ ಕವಿಗಳು ಬೆಳೆಯಬೇಕು. ಕವಿಗಳು ಎಂದಿಗೂ ಹಿಂದೆ ಉಳಿಯಬಾರದು ಕವಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಮಂಡ್ಯ ಜಿಲ್ಲಾ ಕರ್ನಾಟಕ ಜನಪದ ಪರಿಷತ್ ಅಧ್ಯಕ್ಷರಾದ ಡಿ.ಪಿ ಸ್ವಾಮಿ ಹೇಳಿದರು.

ಎಷ್ಟೋ ಕವಿಗಳು ಇಂದಿಗೂ ತಮ್ಮಲ್ಲಿರುವ ಕಲೆಯನ್ನು ಮುಚ್ಚಿಟ್ಟಿರುವವರೇ ಹೆಚ್ಚು, ಕಾರಣ ಅವರಿಗೆ ಒಳ್ಳೆಯ ವೇದಿಕೆ ಸಿಗದೇ ಇರುವುದು ಆದ್ದರಿಂದ ಕವಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕವಿಗಳನ್ನು ಬೆಳೆಸಿ ಎಂದು ಹೇಳಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ದಸರಾ ಪ್ರಧಾನ ಕವಿ ಗೋಷ್ಟಿ ಕಾರ್ಯಕ್ರಮಕ್ಕೆ ಶುಭಾಶಯವನ್ನು ವ್ಯಕ್ತಪಡಿಸಿದರು. ಶ್ರೀರಂಗಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಯುವ ಕವಿಗೋಷ್ಟಿಯಲ್ಲಿ ಮದ್ದೂರು ಅನನ್ಯ, ನಾಗಮಂಗಲ ಮಹದೇವಸ್ವಾಮಿ, ಕೋಡಾಲ ಅಪೇಕ್ಷ, ಚೋಕನಹಳ್ಳಿ ಜಯರಾಮು, ಅಲ್ಲಾಪಟ್ಟಣ ಸತೀಶ್, ಶ್ರೀನಿವಾಸ ಅಗ್ರಹಾರದ ಪೂಜಾ, ಕೆ.ಆರ್ ಪೇಟೆ ಸಹನ, ಬೆಟ್ಟಹಳ್ಳಿ ಜೆ. ರಮೇಶ್, ನಾಗಮಂಗಲ ದೇವಾನಂದ, ಕೆ.ಆರ್.ಎಸ್ ಕಟ್ಟೇ ಕೃಷ್ಣಸ್ವಾಮಿ, ಸುಬ್ಬುಲಕ್ಷ್ಮಿ ಹೆಚ್.ಸಿ, ಶ್ರೀರಂಗಪಟ್ಟಣ ಆರ್.ಕೆ ನಾಗರಾಜು, ಬಲ್ಲೇನಹಳ್ಳಿ ದಾಸ ಪ್ರಕಾಶ್, ಶ್ರೀರಂಗಪಟ್ಟಣ ಆದಿತ್ಯಭಾರಧ್ವಾಜ್, ಸಿ. ಸ್ವಾಮಿಗೌಡ ಸಾಲುಮರದ ನಾಗರಾಜು, ಪರಿಸರ ರಮೇಶ್, ಕಲ್ಲೇರಪುರ ಚುಂಚಣ್ಣ, ಕೆ. ಶೆಟ್ಟಿಹಳ್ಳಿ ರಾಜಶೇಖರ್, ಹರವು ಲೋಕೇಶ್ ಅವರು ಕವನ ವಾಚಿಸಿದರು.

ಪ್ರಧಾನ ಕವಿಗೋಷ್ಟಿಯಲ್ಲಿ ಅರಕೆರೆ ಮಂಜುಳ ರಮೇಶ್, ಕೆ. ಎನ್. ಪುರುಷೋತ್ತಮ್, ಅಶ್ವಿನಿ ವಿ.ಎ, ಸಾ.ವೇ.ರ ಸ್ವಾಮಿ, ಗಣಂಗೂರು ನಂಜೇಗೌಡ, ದೋ.ಚಿ.ಗೌಡ,ಕೆ.ಎಲ್. ಶುಭಾಮಾಣಿ ನಾ.ರೈತ ನಾಗತಿಹಳ್ಳಿ, ಹೆಚ್.ಆರ್. ತ್ರಿವೇಣಿ, ರಂಗನಾಥ, ಶ್ವೇತಾ, ಕಾಳೇಹಳ್ಳಿ ಪುಟ್ಟೇಗೌಡ,ಕೆ.ಪಿ. ಮೃತ್ಯುಂಜಯ, ಎಂ.ಕೆ. ಸಿಂಚನ, ಸಿ.ಬಿ. ಉಮಾಶಂಕರ್, ದಸರಗುಪ್ಪೆ ಚೈತ್ರ, ಕೆ.ಬಿ. ಜಯರಾಮು, ಶ್ರೀರಂಗಪಟ್ಟಣ ಹೆಚ್.ಎಸ್. ಭರತ್ ಕುಮಾರ್, ಪುಟ್ಟಸ್ವಾಮಿ ಹೆಚ್.ಎನ್, ಯಮದೂರು ಮಹಾಲಿಂಗಯ್ಯ, ಡಿ.ವಿ ಪ್ರಮೋದ್, ಶ್ರೀರಂಗಪಟ್ಟಣ ಕಾಡು ಬೋರಣ್ಣ ಅವರು ಕವನ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ.ಬಿ ಕುಮಾರ್, ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಮಹೇಶ್, ಶ್ರೀರಂಗಪಟ್ಟಣ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಬಿ.ವಿ ನಂದೀಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರ್, ಪ್ರಧಾನ ಕಾರ್ಯದರ್ಶಿ ವಿ. ಹರ್ಷ ಪಣ್ಣೆದೊಡ್ಡಿ, ಶ್ರೀರಂಗಪಟ್ಟಣ ಸ್ತ್ರೀ ಸಮಾಜ ರಂಗನಾಯಕಿ ಅಧ್ಯಕ್ಷರು ಆಶಾಲತಾ ಪುಟ್ಟೇಗೌಡ, ಪುರಸಭೆ ಸದಸ್ಯ ಎಂ.ಎಲ್. ದಿನೇಶ್, ಎಸ್.ಎನ್. ದಯಾನಂದ, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಸರ್ಕಾರಿ ನೌಕರರ ಸಂಘ ಅಧ್ಯಕ್ಷಸಿ.ಜೆ. ಶ್ರೀನಿವಾಸ್ ಸೇರಿದಂತೆ ಮತ್ತಿತರರು ಭಾಗವಹಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!