Saturday, June 15, 2024

ಪ್ರಾಯೋಗಿಕ ಆವೃತ್ತಿ

ಔಷಧ ವ್ಯಾಪಾರಿಗಳ ಮತ್ತು ವರ್ತಕರ ವೆಬ್ ಸೈಟ್ ಲೋಕಾರ್ಪಣೆ

ಔಷಧಿ ಮಾರಾಟಗಾರರು ಹಾಗೂ ವರ್ತಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವೆಬ್‌ಸೈಟ್ ಲೋಕಾರ್ಪಣೆ ಮಾಡಲಾಗಿದೆ ಎಂದು ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಸ್ಥೆ(ಎಂಡಿಸಿಡಿಒ)ಯ ಜಿಲ್ಲಾಧ್ಯಕ್ಷ ಬಿ.ಲೋಕೇಶ್ ಹೇಳಿದರು.

ನಗರದ ಹೊರವಲಯದ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದಲ್ಲಿ ಪ್ರಥಮ ಬಾರಿಗೆ ಸಂಸ್ಥೆಯ ವತಿಯಿಂದ ವೆಬ್‌ಸೈಟ್ ಮಾಡಲಾಗಿದೆ. ಇದರಿಂದ ಸದಸ್ಯರಿಗೆ ಎಲ್ಲ ರೀತಿಯ ಅಗತ್ಯ ಮಾಹಿತಿ ಸಿಗಲಿದೆ ಎಂದರು.

ಸಂಸ್ಥೆಯ ಜಿಲ್ಲಾ ಘಟಕ ಪ್ರಾರಂಭದಿಂದಲೂ ರಾಜ್ಯ ಹಾಗೂ ರಾಷ್ಟ್ರೀಯ ಘಟಕಕ್ಕೂ ಮಾದರಿಯಾಗಿದೆ. ವಿನೂತನ ಕಾರ್ಯಕ್ರಮ ಹಾಗೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದು, ಒಟ್ಟಾರೆ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಸ್ಥೆ ಶ್ರಮಿಸಲಿದೆ ಎಂದರು.

ಸಭೆಯಲ್ಲಿ ಹಿರಿಯ ಸಲಹೆಗಾರ ಕೆ.ಪ್ರಭಾಕರ್, ಉಪಾಧ್ಯಕ್ಷ ಬಿ.ರಾಜಣ್ಣ, ಜಂಟಿ ಕಾರ್ಯದರ್ಶಿ ಮಹೇಶ್, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಕಾರ್ಯದರ್ಶಿ ಕೆ.ಎಲ್.ರಾಜಶೇಖರ್, ಬೋರೇಗೌಡ, ವೈಷ್ಣವಿ ಮಂಜುನಾಥ್, ಖಜಾಂಚಿ ಮುನಿಸಿದ್ದೇಗೌಡ, ನಿರ್ದೇಶಕರಾದ ಸುರೇಶ್, ನಂಜೇಗೌಡ, ಬಿ.ನಂದೀಶ್ ಇತರರಿದ್ದರು.

ಇದೇ ವೇಳೆ ಎಲ್ಲ ಸದಸ್ಯರಿಗೂ ಗುರುತಿನ ಚೀಟಿ ಜತೆಗೆ ಉಡುಗೊರೆ ನೀಡಲಾಯಿತು. 25 ವರ್ಷ ಸೇವೆ ಸಲ್ಲಿಸಿದ ಕೆ.ಟಿ.ರವಿಕುಮಾರ್, ಸತೀಶ್, ವೆಂಕಟೇಶ್, ಕೆ.ಪ್ರಭಾಕರ್, ಮುನಿಸಿದ್ದೇಗೌಡರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!