ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆನಂದ್, ಉಪಾಧ್ಯಕ್ಷರಾಗಿ ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು.
11 ನಿರ್ದೇಶಕರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿ ಸಂತೋಷ ಅವರು ನೂತನ ಅಧ್ಯಕ್ಷರಾಗಿ ಆನಂದ್ ಹಾಗೂ ಉಪಾಧ್ಯಕ್ಷರಾಗಿ ಸ್ವಾಮಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ವೇಳೆ ನೂತನ ಅಧ್ಯಕ್ಷ ಆನಂದ್ ಮಾತನಾಡಿ, ನನ್ನನ್ನು ಅವಿರೋಧ ಆಯ್ಕೆ ಮಾಡಲು ಕಾರಣಕರ್ತರಾದ ಎಲ್ಲಾ ನಿರ್ದೇಶಕರಿಗೆ ಅಭಿನಂದಿಸುತ್ತೇನೆ ಸಂಘದ ಅಭಿವೃದ್ದಿ ಗೆ ಶ್ರಮಿಸುತ್ತೇನೆ ಎಂದರು.
ಇನ್ನೂ ಇದೇ ವೇಳೆ ಸ್ವಾಮಿ ಮಾತನಾಡಿ, ರೈತರಿಗೆ ಎಲ್ಲಾ ರೀತಿ ಸಾಲ ಸೌಲಭ್ಯ ನೀಡಲು ಎಲ್ಲಾ ನಿರ್ದೇಶಕರ ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸುತ್ತೇನೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವರಾಜು, ಪಿಎಲ್ ಡಿ ಮಾಜಿ ನಿರ್ದೇಶಕ ಪ್ರಸನ್ನ , ಮಹೇಶ, ಗ್ರಾ.ಪಂ ಅಧ್ಯಕ್ಷ ಗೋವಿಂದರಾಜು, ಮುತ್ತರಾಜು ಹಂಚಿಪುರ, ಮಂಜು, ಶಂಕರೇಗೌಡ, ಹನುಮೇಗೌಡ, ಸಿದ್ದರಾಜು, ತ್ಯಾಗರಾಜು, ಚಿಕ್ಕಮರಿ , ನಿರ್ದೇಶಕ ಹೆಚ್.ಎಂ. ಸ್ವಾಮಿ, ಜಿ.ಕೃಷ್ಣ , ಬಸವರಾಜು, ವೆಂಕಟೇಗೌಡ, ಬೋರೇಗೌಡ, ಜಯಶೀಲ, ನಂದೀಶ್, ಕಮಲಮ್ಮ, ಗಣೇಶ ಸೇರಿದಂತೆ ಹಲವರು ಇದ್ದರು.




