Thursday, November 19, 2026

ಪ್ರಾಯೋಗಿಕ ಆವೃತ್ತಿ

ಆಹಾರ ಸಾಮಾನತೆಗಾಗಿ ಮುಂದುವರಿದ ಹೋರಾಟ | ವೈಜ್ಞಾನಿಕ ಪರಿಷತ್ತಿನಿಂದ ಮೊಟ್ಟೆ-ಮಾಂಸ ಸೇವನೆ

ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆ ಮಾಂಸಾಹಾರ ನೀಡದೇ ಆಹಾರ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂದು ಸಮ್ಮೇಳನದ ಎರಡನೇ ದಿನವಾದ ಶನಿವಾರ ಸಂಜೆ ವೈಜ್ಞಾನಿಕರ ಪರಿಷತ್ ನೇತೃತ್ವದಲ್ಲಿ ಹಲವು ಮುಖಂಡರು ಸಮ್ಮೇಳನದ ಮುಖ್ಯದ್ವಾರದ ಬಳಿ ಕೋಳಿ ಮಾಂಸ ಹಾಗೂ ಮೊಟ್ಟೆ ಸೇವನೆ ಮಾಡಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್, ಮಂಡ್ಯ ಜಿಲ್ಲಾ ಬುದ್ದಿಸ್ಟ್ ಒಕ್ಕೂಟ, ನಾವು ದ್ರಾವಿಡ ಕನ್ನಡಿಗರು ಸಂಘಟನೆಗಳ ವತಿಯಿಂದ ‘ ಆಹಾರ ಸಮಾನತೆ ಕಡೆಗೆ ನಮ್ಮ ನಡಿಗೆ, ಮಾಂಸಾಹಾರದ ಅಸ್ಪೃಶ್ಯತೆ ತೊಲಗಲಿ’ ಎಂಬ ಬ್ಯಾನರ್ ಹಿಡಿದು ಹಲವರು ಮಾಂಸ ಮೊಟ್ಟೆಗಳನ್ನು ಸವಿದರು.

ರಾಜ್ಯದ ಎಲ್ಲ ಜನರ ತೆರಿಗೆ ಹಣದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಕೇವಲ ಸಸ್ಯಾಹಾರವನ್ನು ಮಾತ್ರ ಹೇರಲಾಗುತ್ತಿದೆ. ರಾಜ್ಯದಲ್ಲಿ ಶೇ.80ರಷ್ಟು ಜನ ಮಾಂಸಾಹಾರಿಗಳಿದ್ದಾರೆ. ಆದರೆ ಅವರ ಆಹಾರ ಸಮ್ಮೇಳನದಲ್ಲಿ ಇಲ್ಲವಾಗಿದೆ. ಮಾಂಸಾಹಾರಿಗಳು ರಾಜ್ಯಕ್ಕೆ ತೆರಿಗೆ ಪಾವತಿ ಮಾಡುತ್ತಿದ್ದಾರೆ, ಅವರ ಆಹಾರಕ್ಕೂ ಸಮ್ಮೇಳನದಲ್ಲಿ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವೈಜ್ಞಾನಿಕ ಪರಿಷತ್ತಿನ ಮಂಡ್ಯ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಎಂ.ಸಿ.ಬಸವರಾಜು, ನಾವು ದ್ರಾವಿಡ ಕನ್ನಡಿಗರು ಸಂಘಟನೆ ಹನಕೆರೆ ಅಭಿಗೌಡ, ವಕೀಲರಾದ ಬಿ.ಟಿ.ವಿಶ್ವನಾಥ್, ಲಕ್ಷ್ಮಣ್ ಚೀರನಹಳ್ಳಿ, ಡಿ.ಸಿ.ಮಹೇಂದ್ರ, ಶಿವರಾಜು, ಚಿತ್ರಕೂಟದ ಧನುಷ್ ಗೌಡ ಮತ್ತಿತರರು  ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ