66/11 ಕೆವಿ ಕೆ.ಐ.ಎ.ಡಿ. ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ಕಾರ್ಯ ನಿರ್ವಹಣೆ ಹಮ್ಮಿಕೊಂಡಿರುವು ದರಿಂದ ಮಂಡ್ಯನಗರದ ಕೆಲವು ಬಡಾವಣೆಗಳು ಹಾಗೂ ಗ್ರಾಮಾಂತರ ಪ್ರದೇಶದ ಹಲವು ಗ್ರಾಮಗಳನ್ನು ನಾಳೆ (ಮೇ 23) ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮಂಡ್ಯ ನಗರ ಪ್ರದೇಶದ ಗುತ್ತಲು, ಫ್ಯಾಕ್ಟರಿ ವೃತ್ತ, ಕೈಗಾರಿಕಾ ಬಡಾವಣೆಗಳು, ಎಂ.ಸಿ.ರಸ್ತೆ, ತಾವರೆಗೆರೆ, ನೆಹರು ನಗರ, ಉದಯಗಿರಿ, ಸಾದತ್ ಮೊಹಲ್ಲಾ, ಚನ್ನಯ್ಯ ಬಡಾವಣೆ, ಸಿದ್ಧಾರ್ಥ ಬಡಾವಣೆ, ಬೆಂಗಳೂರು ಮುಖ್ಯ ರಸ್ತೆಯ ಹೆಬ್ಬಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗ್ರಾಮಾಂತರ ಪ್ರದೇಶಗಳಾಧ ಶ್ರೀನಿವಾಸಪುರ ಗೇಟ್, ಕೀಲಾರ ಐ.ಪಿ ವ್ಯಾಪ್ತಿ, ಹನಕೆರೆ, ಮತ್ತು ಐ.ಪಿ ವ್ಯಾಪ್ತಿ, ಬಸವನಪುರ ಐ.ಪಿ ವ್ಯಾಪ್ತಿ, ಬೂದನೂರು, ಭೂತನ ಹೊಸೂರು, ಚನ್ನಪ್ಪನ ದೊಡ್ಡಿ, ಹಂಬರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ನಿರ್ವಾಹಕ ಇಂಜಿಯರ್ ಅವರ ಪ್ರಕಟಣೆ ತಿಳಿಸಿದೆ.




