ಮಂಡ್ಯನಗರದ ಹೊಸಹಳ್ಳಿ ಪಶು ಚಿಕಿತ್ಸಾಲಯದ ಬಳಿ ಹಸುವಿಗೆ ವಿದ್ಯುತ್ ಸ್ಪರ್ಶಿಸಿದ ಅವಘಡ ಶುಕ್ರವಾರ ಬೆಳಿಗ್ಗೆ ನಡೆಸಿದೆ.
ವಿದ್ಯುತ್ ಸ್ಪರ್ಶಿಸಿ ಕೆಳಕ್ಕೆ ಬಿದ್ದಿದ್ದ ಹಸುವಿಗೆ ಪಶು ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದರಿಂದ ಹಸುವು ಚೇತರಿಸಿಕೊಂಡಿದೆ. ಅನಾರೋಗ್ಯಗೊಂಡಿದ್ದ ಹಸುವನ್ನು ಕರೆತಂದಿದ್ದ ಸಂಬಂಧದಲ್ಲಿ ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಸ್ಪರ್ಶವಾಗಿ ಹಸುಕೆಳಕ್ಕೆ ಬಿದ್ದಿತು, ಮೂಗು ಬಾಯಲ್ಲಿ ರಕ್ತ ಸೋರಿಕೆಯಾಯಿತು, ಇದನ್ನು ಕಂಡ ಪಶು ಆಸ್ಪತ್ರೆ ಸಿಬ್ಬಂದಿ ಕೂಡಲೇ ಚಿಕಿತ್ಸೆ ನೀಡಿದರು.
ಈ ಹಿಂದೆ ಕೂಡ ಇದೇ ಟ್ರಾನ್ಸ್ ಫಾರ್ಮರ್ ನಿಂದ ಇಬ್ಬರಿಗೆ ವಿದ್ಯುತ್ ಸ್ಪರ್ಶವಾಗಿ ಅನಾಹುತ ಸಂಭವಿಸಿತ್ತು, ಆದರೂ ಸಹ ಸೆಸ್ಕ್ ಅಧಿಕಾರಿಗಳು ಟ್ರಾನ್ಸ್ ಫಾರ್ಮರ್ ಸ್ಥಳಾಂತರಕ್ಕೆ ಮುಂದಾಗುತ್ತಿಲ್ಲ ಅಥವಾ ಸುತ್ತಲೂ ಬೇಲಿ ಹಾಕುವ ಕೆಲಸ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ




