ಬೆಂಗಳೂರಿನ ಕರ್ನಾಟಕ ಎಂಡೋಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡತನ ರೇಖೆಗಿಂತ ಕೆಳಗಿರುವ ಹಸಿರು ಕಾರ್ಡುದಾರರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಈ ಸೌಲಭ್ಯವನ್ನು ಇತ್ತೀಚೆಗೆ ನಿಲ್ಲಿಸಿದ್ದು, ಬಡವರು ಹಣ ಕೊಟ್ಟು ಚಿಕಿತ್ಸೆ ಪಡೆಯುವಂತಾಗಿದೆ, ಆದ್ದರಿಂದ ಎಂದಿನಂತೆ ಉಚಿತ ಚಿಕಿತ್ಸೆ ಮುಂದುವರಿಸುವಂತೆ ಮಂಡ್ಯ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಎನ್.ಶೇಖರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಜೂನ್-2025ನೇ ಮಾಹೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಸಿರು ಕಾರ್ಡುದಾರರಿಗೆ ಉಚಿತ ಚಿಕಿತ್ಸೆಯನ್ನು ನಿಲ್ಲಿಸಿರುವುದರಿಂದ ಸಾವಿರಾರು ಬಡವರಿಗೆ ತೊಂದರೆಯುಂಟಾಗಿದೆ. ಇದರಿಂದಾಗಿ ಲಕ್ಷಾಂತರ ಮಂದಿ ವೈದ್ಯಕೀಯ ಚಿಕಿತ್ಸೆಯಿಂದ ವಂಚಿತರಾಗಿದ್ಧಾರೆ. ಅಲ್ಲದೇ ಪ್ರತೀ ತಿಂಗಳು ಬಡವರಿಗೆ ಪ್ರತಿ ತಿಂಗಳು ಸುಮಾರು ರೂ.3,000/-ಗಳಿಂದ ರೂ.4,000/ ವೈದ್ಯಕೀಯ ವೆಚ್ಚ ಭರಿಸುವುದು ಕಷ್ಟವಾಗಿದೆ. ಅಲ್ಲದೇ ಮಾತ್ರೆ ಮತ್ತು ಔಷಧಗಳನ್ನು ಹೊರಗಡೆ ತೆಗೆದುಕೊಳ್ಳುವಂತೆ ವೈದ್ಯಕೀಯ ಪತ್ರವನ್ನು ನೀಡುತ್ತಾರೆ. ಇದನ್ನು ಪ್ರತೀ ತಿಂಗಳು ಭರಿಸಲು ತುಂಬಾ ಕಷ್ಟಕರವಾಗಿವುದರಿಂದ ಇದನ್ನು ತಪ್ಪಿಸಿ, ಬಡವರಿಗೆ ಅನುಕೂಲ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದ್ದಾರೆ.
ಇಂದಿರಾಗಾಂಧಿಯವರ ಕಾಲದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡತನ ರೇಖೆಗಿಂತ ಜನರಿಗೆ ಉಚಿತವಾಗಿ ಕರ್ನಾಟಕ ಎಂಡೋಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ದೊರೆಯುತ್ತಿದ್ದು, ಅದನ್ನೇ ಮುಂದುವರಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.




