ತುಮಕೂರು ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ರಾಜೇಶ್ ಅವರ ಸಂಬಂಧಿಕರ ಮನೆ ಮೇಲೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿರುವ ಲೋಕೋಯುಕ್ತ ಪೊಲೀಸರು ಪರಿಶೀಲನೆ ನಡೆಸಿದರು.
ಅಪಾಧಿತ ರಾಜೇಶ್ ಅವರ ತಂದೆ ಹಾಗೂ ಮಳವಳ್ಳಿ ತಾಲ್ಲೂಕಿನ ಉಗ್ರಾಣಪುರದೊಡ್ಡಿ ಗ್ರಾಮದಲ್ಲಿರುವ ರಾಜೇಶ್ ಅವರ ಅಕ್ಕನ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಡಿವೈಎಸ್ಪಿ ಡಾ.ಸಂತೋಷಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ರಾಜು ಅವರ ನೇತೃತ್ವದ ಎರಡು ತಂಡ ಪರಿಶೀಲನೆ ನಡೆಸಿದರು.




