Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಯಶ್ವಂತ್ ಶವ ಪತ್ತೆ

ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದ ಯಶ್ವಂತ್ ಎಸ್‌. ಎ. ಎಂಬ 22 ವರ್ಷದ ಯುವಕ ಮಂಡ್ಯ ಸಮೀಪ ಸಿದ್ದಯ್ಯನ ಕೊಪ್ಪಲು ಬಳಿ ಇರುವ ಕಾವೇರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದು,  ಆಕಸ್ಮಿಕವಾಗಿ ಯಲಿಯೂರು ಬಳಿಯ ಕಾಳೇನಳ್ಳಿ, ವಿಶ್ವೇಶ್ವರಯ್ಯ ನಾಲೆಯಲ್ಲಿ ಜಾರಿ ಕೊಚ್ಚಿಕೊಂಡು ಹೋಗಿದ್ದ ಯಶ್ವಂತ್ ಗಾಗಿ  ಶೋಧ ಕಾರ್ಯ ನಡೆಯುತ್ತಿತ್ತು.

ಈ ಶೋಧವನ್ನು ಅಗ್ನಿಶಾಮಕ ದಳ ಹಾಗೂ ಹಾಗೂ ಸಾರ್ವಜನಿಕರ ಜೊತೆಗೂಡಿ ಶೋಧ ನಡೆಸಿದ್ದು ನೆನ್ನೆ ಸೂರ್ಯಾಸ್ತಮವಾಗುವವರೆಗೂ ಶವ ಸಿಗಲಿಲ್ಲ ಆದರೆ ಇಂದು ಸುಮಾರು 10:11:24 ರ ಬೆಳಿಗ್ಗೆ ಸುಮಾರು ಏಳು ಗಂಟೆಗೆ ಸಾರ್ವಜನಿಕರು ಹಾಗೂ ಸಂಬಂಧಿಕರು ಜೊತೆಗೂಡಿ,  ಕಾಳೇನಳ್ಳಿ ಬಳಿಯ ನಾಲೆ ಹಾಗೂ ಪಿ. ಹಳ್ಳಿಯ ನಾಲೆಯ ಬಳಿ ಹುಡುಕಲು ಪ್ರಾರಂಭಿಸಲಾಯಿತು.

ಅಲ್ಲಿಯ ಸ್ಥಳೀಯ ರೈತರು ಬಟ್ಟೆ ಇಲ್ಲದ ಒಂದು ಯುವಕನ ದೇಹ ತೇಲಿ ಹೋಗುತ್ತಿದೆ ಎಂದು ಮಾಹಿತಿ ತಿಳಿಸಿದರು. ನಂತರ ಪಿ. ಹಳ್ಳಿ ಬಳಿ ಕಾಯಲು ಸಂಬಂಧಿಕರು ಸ್ನೇಹಿತರು ದೇಹವು ತೇಲುತ್ತಾ ಮುಂದೆ ಸಾಗಿದೆ, ಅಷ್ಟರಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಗೂ ಕಾಳೇನಳ್ಳಿ ವಿಶ್ವನಾಥ್ ಎಂಬ ಈಜು ಪರಿಣಿತರೊಬ್ಬರ ಸಹಾಯದ ಜೊತೆ ಸೇರಿಕೊಂಡು, ಲಾಳನ್ಕೆರೆ ಬಳಿ ಪರಿಣಿತ ಈಜುಗಾರ ಜೊತೆ ಸೇರಿ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.

ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಲ್ಲಿನ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ