Saturday, November 21, 2026

ಪ್ರಾಯೋಗಿಕ ಆವೃತ್ತಿ

ಅವಧಿ ಮೀರಿದ ಮಾತ್ರೆ ವಿತರಣೆ: ಸಾರ್ವಜನಿಕರ ಆಕ್ರೋಶ

ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಅವಧಿ ಮುಗಿದಿರುವ ಮಾತ್ರೆಗಳನ್ನು ನೀಡಿದ್ದು, ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆಯನ್ನು ಸಾರ್ವಜನಿಕರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾತ್ರೆಗಳ ಮೇಲೆ ಅವಧಿಯ ಮುದ್ರಣವನ್ನು ಗಮನಿಸಿದ ರೋಗಿಗಳು ಹಾಗೂ ಸಾರ್ವಜನಿಕರು ವೈದ್ಯರು ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರದಿಂದ 2019 ರಲ್ಲಿ ತಯಾರಿಸಿದ ಮಾತ್ರೆಗಳನ್ನು ಸರಬರಾಜು ಮಾಡಿದ್ದು ಇದೇ ವರ್ಷದ ಮಾರ್ಚ್ 2022 ರಲ್ಲಿ ಮಾತ್ರೆಗಳ ಅವಧಿ ಮುಗಿದಿದೆ.

ಅವಧಿ ಮುಗಿದು ಆರು ತಿಂಗಳು ಆಗಿದ್ದರೂ ಮಾತ್ರೆಗಳನ್ನು ರೋಗಿಗಳಿಗೆ ಇನ್ನೂ ನೀಡುತ್ತಾ ಬಂದಿರುವುದು ಬೇಜವಾಬ್ದಾರಿತನ ತೋರುತ್ತದೆ.

ರೋಗಿಗಳು ಆಸ್ಪತ್ರೆಗೆ ಗುಣವಾಗಲೆಂದು ಬರುತ್ತಾರೆ. ಈ ಆಸ್ಪತ್ರೆಯಲ್ಲಿ ಅವಧಿ ಮುಗಿದ ಮಾತ್ರೆಗಳನ್ನು 6 ತಿಂಗಳಿನಿಂದ ರೋಗಿಗಳಿಗೆ ನೀಡಿ ಸಾವಿನ ದವಡೆಗೆ ತಳ್ಳಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ,ಶ್ರೀನಿವಾಸ್,ಯುವ ಮುಖಂಡ ಪ್ರಮೋದ್ ತರಾಟೆಗೆ ತೆಗೆದುಕೊಂಡರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ