Friday, November 20, 2026

ಪ್ರಾಯೋಗಿಕ ಆವೃತ್ತಿ

ರೈತ ನಾಯಕ

ಅರವಿಂದ ಪ್ರಭು

ಅವನ
ಒಂದು ಕೂಗಿಗೆ
ಅಸಂಖ್ಯಾತ ರೈತರು
ಹೊಲ ಗದ್ದೆಗಳಿಂದ
ಎದ್ದು ಬಂದರು..

ವಿಧಾನಸೌಧ
ಡಿಸಿ ಕಚೇರಿಗಳು
ನಡುಗಿದವು..

ಅವನ
ಹಸಿರು ಟೋಪಿಗೆ
ಕೊಬ್ಬಿದ್ದ ಭ್ರಷ್ಟರು
ಬೆದರಿ ಕುಂತರು
ಬಾಗಿದ್ದ ರೈತರು
ಎದ್ದು ನಿಂತರು..

ಅವನ
ಗುಂಡಿಗೆಯ ಮುಂದೆ
ಸರಕಾರದ ಗುಂಡುಗಳು
ಪೊಲೀಸರ ಲಾಠಿಗಳು
ಮಂಡಿಯೂರಿದವು..

ಅವನ
ಬಳಿ ಬಾರುಕೋಲು
ಸದಾ ಇರುತ್ತಿತ್ತು
ಸರಕಾರಗಳಿಗೆ
ಅದು ಆಗಾಗ ಚಳಿ
ಬಿಡಿಸುತಿತ್ತು..

ಅವನ
ಕನಸುಗಳಲ್ಲಿ
ಬರೀ ಹಳ್ಳಿಗಾಡಿನ
ಜನರೇ ತುಂಬಿದ್ದರು
ಸೂರುಗಳಿಲ್ಲದ
ಆ ಊರಿನಲ್ಲಿ ರೈತರು
ಅರಮನೆಗಳನ್ನು
ಕಟ್ಟುತ್ತಿದ್ದರು..

ಅವನಿಗೊಂದು
ಹೆಸರೂ ಇತ್ತು
ದೇಶದ ಜನರಿಗೆ ಅದು
ಬಾಯಿಪಾಠವೂ
ಆಗಿತ್ತು..

ಅದು ಹೀಗಿತ್ತು

ಪ್ರೊಫೆಸರ್
ಎಂ.ಡಿ. ನಂಜುಂಡಸ್ವಾಮಿ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ