Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ: ಕೊಲೆ ಬೆದರಿಕೆ

ಕೆ.ಆರ್.ಪೇಟೆ ತಾಲೂಕಿನ ಬಿಬಿ ಕಾವಲು ಗ್ರಾಮದ ಸರ್ವೆ ನಂಬರ್ 1ರ ಪೈಕಿ ನಾಲ್ಕು ಎಕರೆ ಕೃಷಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದ ಕೆ.ಟಿ.ಆಶಾ ಅವರನ್ನು ಒಕ್ಕಲೆಬ್ಬಿಸಲು ಕೊಲೆ ಬೆದರಿಕೆ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಕಿಡಿಗೇಡಿಗಳ ವಿರುದ್ದ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಕೆ.ಆರ್.ಪೇಟೆ ಪಟ್ಟಣದ ತಮ್ಮಣ್ಣಗೌಡ ನಗರ ಬಡಾವಣೆಯಲ್ಲಿ ವಾಸವಾಗಿರುವ ಡ್ರೈವರ್ ಮಂಜೇಗೌಡರ ಪತ್ನಿ ಪ್ರಮೀಳಾ ಮಗ ನಟರಾಜ್, ಡ್ರೈವರ್ ಗಂಗಾಧರ, ಜ್ಯೋತಿ, ಜೀವನ್, ಕುಂದನಹಳ್ಳಿಯ ಕೋಳಿ ಫಾರಂ ಜಗದೀಶ್, ಗಿರಿಜಮ್ಮ, ಶ್ರೀನಿವಾಸಗೌಡ ಇವರು ಗುಂಪು ಕಟ್ಟಿಕೊಂಡು ಬಂದು ಏಕಾಏಕಿ ಹಲ್ಲೆ ನಡೆಸಿ, ಜಮೀನಿನಲ್ಲಿದ್ದ ಕೊಳವೆ ಬಾವಿ, ತೆಂಗಿನ ಗಿಡಗಳು ಹಾಗೂ ತೋಟಗಾರಿಕೆ ಗಿಡಗಳನ್ನು ನಾಶಪಡಿಸಿ ಜಮೀನನ್ನು ಬಿಟ್ಟುಕೊಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಕಣ್ಣೀರು ಹಾಕಿದ ಆಶಾ, ತಮ್ಮ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಜೀವನ್ ಮತ್ತು ಆತನ ಬಂಧುಗಳ ವಿರುದ್ದ ಕಾನೂನು ಕ್ರಮ ಜರುಗಿಸಿ ತಮಗೆ ರಕ್ಷಣೆ ನೀಡುವಂತೆ ಗ್ರಾಮಾoತರ ಪೊಲೀಸರಿಗೆ ಮನವಿ ಮಾಡಿದ್ದಾರೆ.

ನಾನು ಹಾಗೂ ನನ್ನ ಪತಿ ಕಳೆದ 25ವರ್ಷಗಳಿಂದ ಈ ಕೃಷಿ ಭೂಮಿಯನ್ನು ಬೇಸಾಯ ಮಾಡುತ್ತಿರುವ ಭೂಮಿಯನ್ನು ಕಬಳಿಸಲು ಸಂಚು ನಡೆಸಿರುವ ಕಿಡಿಗೇಡಿಗಳ ವಿರುದ್ಧ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಆಶಾ ಪೊಲೀಸರು ಹಾಗೂ ಕಂದಾಯ ಇಲಾಖೆಯ ಮುಖ್ಯಸ್ಥರಾದ ತಹಶೀಲ್ದಾರ್ ನಿಸರ್ಗಪ್ರಿಯ ಅವರಲ್ಲಿ ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ