- ವಿಶ್ವೇಶ್ವರಯ್ಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಘಟಕಕ್ಕೆ ಚಾಲನೆ
- ಶಾಲಾ ಮಕ್ಕಳಿಗೆ ಅನುಕೂಲವಾಗುವ ಪರಿಕರಗಳನ್ನು ನೀಡಿದ ಫೈಟರ್ ರವಿ
ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಫೈಟರ್ ರವಿಯವರು ಜನರ ಮನಸ್ಸಿನಲ್ಲಿ ನೆಲೆಸಿದ್ದು,ಅವರ ಸಮಾಜ ಸೇವೆ ಶ್ಲಾಘನೀಯ ಎಂದು ಶಿಕ್ಷಕ ಮಂಜುನಾಥ್ ಬಣ್ಣಿಸಿದರು.
ನಾಗಮಂಗಲ ತಾಲ್ಲೂಕಿನ ದೇವಲಾಪುರ ಹೋಬಳಿಯ ಜಿ.ಬೊಮ್ಮನಹಳ್ಳಿ ಗ್ರಾಮದಲ್ಲಿರುವ ವಿಶ್ವೇಶ್ವರಯ್ಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಫೈಟರ್ ರವಿಯವರು ಶುದ್ಧ ಕುಡಿಯುವ ನೀರು ಘಟಕಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜ ಸೇವಕರಾದ ಫೈಟರ್ ರವಿ ಅವರು ಸಾಮಾಜಿಕ ಬದ್ಧತೆಯಡಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಲವು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ.ಮಕ್ಕಳು ಶುದ್ಧವಾದ ನೀರು ಕುಡಿದು ಉತ್ತಮ ಆರೋಗ್ಯ ಹೊಂದಲಿ ಎಂಬ ಉದ್ದೇಶದಿಂದ ಹಲವು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಕಿಸಿಕೊಟ್ಟಿದ್ದಾರೆ.
ಮಕ್ಕಳ ವಿದ್ಯಾಭ್ಯಾಸದ ಕಡೆ ಸಹಕಾರ ನೀಡುವ ಮುಖಾಂತರ ನಾಗಮಂಗಲ ತಾಲೂಕಿನ ಎಲ್ಲಾ ಭಾಗಗಳಲ್ಲಿ ನಿತ್ಯ ನಿರಂತರದಂತೆ ಸೇವಾ ಹಸ್ತ ನೀಡುತ್ತಿದ್ದಾರೆ. ಇವರ ಸಾಮಾಜಿಕ ಸೇವಾ ಕಾರ್ಯಕ್ಕೆ ಇನ್ನಷ್ಟು ಶಕ್ತಿ ನೀಡಲೆಂದು ಹಾರೈಸಿದರು.
ಇದೆ ವೇಳೆ ಶಾಲಾ ಮಕ್ಕಳಿಗೆ ಅನುಕೂಲವಾಗುವ ಪರಿಕರಗಳನ್ನು ಫೈಟರ್ ರವಿ ಅವರು ನೀಡಿದರು
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರುಗಳಾದ ಮಂಜುನಾಥ್, ಬಸವರಾಜು, ಸತೀಶ್,ಸುರೇಶ್ ಕಬ್ಬೂರ್, ಧರಣೇಂದ್ರ ಕುಮಾರ್, ಜಯಶೀಲ,ನಳಿನ,ಚೇತನ್ ಗ್ರಾಮದ ಮುಖಂಡರುಗಳು ಹಾಜರಿದ್ದರು.




