ಮಂಡ್ಯ ತಾಲೂಕು ಹೊಳಲು ಗ್ರಾಮದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಹಾಗೂ ಮಂಡ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವತಿಯಿಂದ ಇತ್ತೀಚಿಗೆ ಹೊಳಲು ಗ್ರಾಮದಲ್ಲಿ ನಡೆದ ” ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ ಕಾರ್ಯಕ್ರಮ”ವು ಗ್ರಾಮದ ಸರ್ಕಾರಿ ಹಿರಿಯ ಶಾಲೆಯ ಆವರಣದಲ್ಲಿ ನಡೆಯಿತು.
ಉದ್ಘಾಟನೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಪ್ರಫುಲ್ ಕುಮಾರ್ ಜಿನಾ ರವರು ನೆರವೇರಿಸಿ, ಮಾತನಾಡುತ್ತಾ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಜನರಿಗೆ ಸಹಕಾರಿ ಎಂಬ ಆಶಯ ವ್ಯಕ್ತಪಡಿಸಿದರು.
ಸೈಬರ್ ಕ್ರೈಂ ಗಳು ಹೆಚ್ಚಾಗಿರುವಂತಹ ಸಂದರ್ಭದಲ್ಲಿ ಅಕ್ಷರಸ್ಥರು ಕೂಡ ವಂಚನೆಗೆ ಒಳಗಾಗುತ್ತಿದ್ದು ,ಜಾಗೃತರಾಗಿರಲು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಉಪಪ್ರಧಾನ ವ್ಯವಸ್ಥಾಪಕರಾದ ವೆಂಕಟ್ ರಘುರಾಮನ್ ಚಿಂತಾ ಜನದನ್ ಯೋಜನೆ ಮತ್ತು ಇತರೆ ಉಳಿತಾಯ ಖಾತೆ ಹೊಂದಿರುವವರು ,10 ವರ್ಷ ತುಂಬುತ್ತಿರುವ ಖಾತೆದಾರರು ತಪ್ಪದೇ re. kyc ಮಾಡಿಸಿ ಖಾತೆಗಳು ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಿ, ಬ್ಯಾಂಕಿಂಗ್ ಪರಿತ ಸೇವೆಗಳನ್ನು ಪಡೆಯಬೇಕಾಗಿ
ಕರೆ ನೀಡಿದರು.
ಆರ್ಥಿಕ ಸಾಕ್ಷರತಾ ಸಮಾಚಕರದ ಕೆ.ಪಿ.ಅರುಣಾ ಕುಮಾರಿರವರು ಮಾತನಾಡಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮ ಯೋಜನೆ 18 ರಿಂದ 50 ವರ್ಷದವಳಾಗಿರುವವರಿಗಾಗಿ ವರ್ಷಕ್ಕೆ 436 ಪಾವತಿಸಿ, ಎರಡು ಲಕ್ಷ ಜೀವವಿಮೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮೂಲಕ 8 ರಿಂದ 70 ವರ್ಷ ವಯಸ್ಸಿನವರಿಗೆ ವರ್ಷಕ್ಕೆ ಕೇವಲ 20 ರೂಪಾಯಿ ಪಾವತಿಸಿ, 2 ಲಕ್ಷ ಅಪಘಾತ ವಿಮೆ ಪಡೆಯುವ ಅತ್ಯುತ್ತಮ ಯೋಜನೆಗಳಾಗಿದ್ದು ಈ ಯೋಜನೆಗಳಿಗೆ ಪ್ರತಿಯೊಬ್ಬರೂ ನೋಂದಾಯಿಸಲು ಕರೆ ನೀಡಿದರು.
ಎಸ್ ಬಿ ಐ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕರಾದ ಸುಮನ ಮಾತನಾಡಿ ಬ್ಯಾಂಕ್ ಮೂಲಕ ಸ್ತ್ರೀಶಕ್ತಿ ಸಂಘಗಳಿಗೆ, ರೈತರಿಗೆ, ಉದ್ಯಮಿದರರಿಗೆ, ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ರಮ್ಯಾಚೇತನ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್ ಬಿ.ದೊಡ್ಡೇಗೌಡ. ಎಸ್ ಬಿ ಐ ಬ್ಯಾಂಕ್ ನ ಕಸ್ತೂರಿ, ಎಫ್ ಐ ಮ್ಯಾನೇಜರ್ ಧೀರೇಂದ್ರ, ಶಾಖಾ ವ್ಯವಸ್ಥಾಪರಾದ ಕುಶಾಲ್, ಡಾ. ಶುಭಶ್ರೀ, ಎಸ್ ಬಿ ಐ.ಗ್ರಾಹಕ ಸೇವಾ ಕೇಂದ್ರದ ವಿಕಾಸ್, ಹಾಗೂ ಹೊಳಲು ಗ್ರಾಮದ ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದರು .
ಇದೇ ಸಂದರ್ಭದಲ್ಲಿ ಸಾಲಮಂಜೂರಾತಿ ಪ್ರಮಾಣ ಪತ್ರ ,ವಿದ್ಯಾರ್ಥಿಗಳಿಗೆ ಪಾಸ್ ಬುಕ್ ವಿತರಣೆ, ಹಾಗೂ ಆರ್ಥಿಕ ಸಾಕ್ಷರತೆ ಕುರಿತು ಪರಿಸರ ಸಂಸ್ಥೆಯಿಂದ ಜಾಗೃತಿ ನಾಟಕ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೋಂದಾಯಿಸಿಕೊಡಲಾಯಿತು.




