Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೆಣ್ಣುಭ್ರೂಣ ಪತ್ತೆ ಮಾಡಿಸಲು ಬಂದವನ ಮೇಲೆ ಎಫ್ಐಆರ್: ಮೂವರ ಬಂಧನ

ನಾಗಮಂಗಲ ತಾಲ್ಲೂಕಿನ ಮಾವಿನಕರೆ ತೋಟದ ಮನೆಗೆ ಹೆಣ್ಣುಭ್ರೂಣ ಪತ್ತೆ ಮಾಡಿಸಲು ಹಾಸನದ ಅರಕಲಗೂಡು ತಾಲ್ಲೂಕಿನ ರಾಮನಾಥಪುರದಿಂದ ತನ್ನ ಗರ್ಭೀಣಿ ಪತ್ನಿಯೊಂದಿಗೆ ಆಗಮಿಸಿದ್ದ ಮನೋಹರ್ ಎಂಬಾತನ ಮೇಲೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದ ನಾಗಮಣಿ ಎಂಬುವವರನ್ನು ಬಂಧಿಸಲಾಗಿದೆ. ಈಕೆ ಕಳೆದ 8 ವರ್ಷಗಳಿಂದ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಡಿ ಗ್ರೂಪ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು, ಈಕೆಯೊಂದಿಗೆ ಮತ್ತೊಬ್ಬ ಏಜೆಂಟ್ ಧನಂಜಯ ಕೂಡ ಕೆಲಸ ನಿರ್ವಹಿಸುತ್ತಿದ್ದ, ಭ್ರೂಣಪತ್ತೆ ಮಾಡಿಸಿಕೊಳ್ಳಲು ಬಯಸುವವರನ್ನು ಸಂಪರ್ಕಿಸಿ ಕರೆ ತರುತ್ತಿದ್ದರು ಎನ್ನಲಾಗಿದೆ.

ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ಸ್ಕ್ಯಾನಿಂಗ್ ನಡೆಸುತ್ತಿದ್ದ ಅಭಿಷೇಕ್ ಎಂಬ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಅಭಿಷೇಕ್ ಈ ಹಿಂದೆ ಬೈಯ್ಯಪ್ಪನಹಳ್ಳಿ ಪೊಲೀಸರು ಭೇದಿಸಿದ ಪ್ರಕರಣದಲ್ಲಿ ಹಾಗೂ ಪಾಂಡವಪುರದ ಬಳಿ ಭ್ರೂಣ ಪತ್ತೆ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ, ಆದ್ದರಿಂದ ಎಲ್ಲಾ ಕಡೆ ಅಭಿಷೇಕನ ಹೆಸರು ಕೇಳಿ ಬರ್ತಿದೆ. ಅಭಿಷೇಕ್ ಸಿಕ್ಕರೆ ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಪತ್ತೆ ಹತ್ಯೆ ಪ್ರಕರಣ ಅಂತ್ಯ ಕಾಣಬಹುದು ಎಂದು ಡಿಎಚ್ಓ ಡಾ.ಮೋಹನ್ ನುಡಿಕರ್ನಾಟಕ.ಕಾಂಗೆ ತಿಳಿಸಿದ್ದಾರೆ.

ದಾಳಿಗೆ ಮುನ್ನ ಯೋಜನೆ ರೂಪಿಸಿದ ಡಿಎಚ್ಓ ಡಾ.ಮೋಹನ್ ನೇತೃತ್ವದ ತಂಡ, ತಾವೇ ಒಬ್ಬ ವ್ಯಕ್ತಿಯನ್ನು ರೆಡಿ ಮಾಡಿ, ಭ್ರೂಣ ಪತ್ತೆ ಮಾಡಿಸಿಕೊಳ್ಳಬೇಕೆಂದು ಆರೋಪಿಗಳ ಬಳಿ ಹೇಳಿಸಿ, ಅವರು ಹೇಳಿದಂತೆ ನಡೆದುಕೊಳ್ಳುವಂತೆ ತಿಳಿಸಿ, ಅಂತಿಮವಾಗಿ ತೋಟದ ಮನೆಯಲ್ಲಿ ನಡೆಯುತ್ತಿದ್ದ ಅಕ್ರಮ ಸ್ಕ್ಯಾನಿಂಗ್ ಸೆಂಟರನ್ನು ಪತ್ತೆ ಹಚ್ಚಿದ್ದಾರೆ. ದಾಳಿ ವೇಳೆ AB2 KIT ಮಾತ್ರೆಗಳು ಸಿಕ್ಕಿವೆ. ಇವು ಯಾವ ಮೆಡಿಕಲ್ ನಲ್ಲಿ ಸಿಕ್ತು ಅನ್ನೋದನ್ನ ತನಿಖೆ ಮಾಡಬೇಕಿದೆ. ಸದ್ಯಕ್ಕೆ ಮನೋಹರ್, ಧನಂಜಯ, ನಾಗಮಣಿ ಅವರನ್ನು ಅರೆಸ್ಟ್ ಮಾಡಲಾಗಿದ್ದು, ಆರೋಪಿ ಅಭಿಷೇಕ್ ನ  ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ