ಬೆಂಕಿಯನು
ನಂದಿಸಲು
ನಂಟಿರಬೇಕಾದ್ದು
ನೀರಿನ ಜೊತೆಗೇ ಹೊರಟು
ಬೂದಿಮುಚ್ಚಿದ
ಕೆಂಡದ ಜೊತೆಗಲ್ಲ….
ಕೆಂಡವು ಕಾಯುವುದು
ಬೆಂಕಿಯಾಗುವ
ಗಾಳಿಗೆ ಹೊರತು
ನಂದಿಹೋಗುವ ಗಳಿಗೆಗಲ್ಲ..
ಉರಿ ಕಡಿಮೆಯಾಗುವುದು
ಸಾಕೆಂದರೆ
ಬೆಂಕಿಯ ಬಂಧುಗಳೇ
ನೀಡಿಯಾರು….
ಬಾಣಲೆಯನ್ನು
ಬೆಂಕಿಯನ್ನು
ಆರಿಸುವುದೇ
ಗುರಿಯಾದಲ್ಲಿ…
ಬೇಯುತ್ತಿರುವವರೇ
ಒಟ್ಟುಗೂಡಿಸಬೇಕು
ಹನಿಹನಿ ನೀರನ್ನು…ಬೆವರನ್ನು ..
ಹುಡುಕಿ ಕೂಡಬೇಕು ಮತ್ತೆ
ಕಳೆದುಹೋದ ನೀರಿನ ನಂಟನ್ನು….
ತಿದಿ ಒತ್ತಿ ಮೇಲೆತ್ತಬೇಕು
ಬತ್ತಿಹೋದ ಅಂತರ್ಜಲವನ್ನು
✍🏿 ಶಿವಸುಂದರ್




