Friday, November 20, 2026

ಪ್ರಾಯೋಗಿಕ ಆವೃತ್ತಿ

ಕುವೆಂಪು ಅವರ ವಿಶ್ವಮಾನವ ಸಂದೇಶ ಅನುಸರಿಸಿ ; ಶಿವಾನಂದಮೂರ್ತಿ

ರಾಷ್ಟ್ರಕವಿ ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮೇಲು- ಕೀಳು ಎಂಬ ಮನೋಭಾವನೆಯಿಂದ ಹೊರಬರಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.

ಮಂಡ್ಯದ ರೈತ ಸಭಾಂಗಣದ ಮುಂಭಾಗ ಇರುವ ಕುವೆಂಪು ಪುತ್ಥಳಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಮಹಾಯೋಗಿ ವೇಮನ ಜಯಂತಿಯನ್ನು ಡಿ.ದೇವರಾಜು ಅರಸು ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು,

ರಾಷ್ಟ ಕವಿ ಕುವೆಂಪು ರವರ ತತ್ವ ಆದರ್ಶ ಮತ್ತು ಚಿಂತನೆಯನ್ನು ಯುವ ಪೀಳಿಗೆ ಬೆಳೆಸಿಕೊಳ್ಳಬೇಕು. ಡಾ.ಬಿ.ಆರ್. ಅಂಬೇಡ್ಕರ್ ರವರು ಸಹ ನಾವೆಲ್ಲರೂ ಒಂದೇ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ, ಅದೇ ರೀತಿ ತೆಲುಗಿನ ಪ್ರಸಿದ್ಧ ಕವಿ ವೇಮನ ರವರು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಶೈಲಿಯಲ್ಲಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಜಿಲ್ಲಾಡಳಿತ ಇವರ ಜಯಂತಿಯನ್ನು ತುಂಬಾ ಸಂತೋಷದಿಂದ ಆಚರಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಇಡೀ ರಾಷ್ಟ್ರವೇ ಒಪ್ಪಿಕೊಂಡಿದೆ, ಕನ್ನಡ ಸಾಹಿತ್ಯವನ್ನೂ ಜಾಗತಿಕವಾಗಿ ಬೆಳೆಸಿದ ಕವಿಗಳಲ್ಲಿ ಕುವೆಂಪು ಅಗ್ರಗಣ್ಯರು ಎಂದು ಹೇಳಿದರು.

ಕುವೆಂಪು ರವರ ಬರವಣಿಗೆಯಲ್ಲಿ ಕನ್ನಡದ ಬಗ್ಗೆ ಪ್ರಕೃತಿ ಸೌಂದರ್ಯದ ಬಗ್ಗೆ ಅದ್ಬುತವಾದ ನಿರೂಪಣೆಯನ್ನ ನಾವು ಕಾಣಬಹುದಾಗಿದೆ, ಬದುಕಲ್ಲಿ ಅಂಧಕಾರ ತುಂಬಿದಾಗ ಅದರಿಂದ ಹೊರಗೆ ಬರಲು ಜ್ಞಾನದ ದೀವಿಗೆಯಿಂದ ಮಾತ್ರ ಸಾಧ್ಯ ಎಂದು ಕುವೆಂಪು ಹೇಳುತ್ತಿದ್ದರು ಎಂದರು.

ಕನ್ನಡ ಉಪನ್ಯಾಸಕ ಕೆ.ಪಿ. ಮೃತುಂಜಯ ಅವರು ಮಾತನಾಡಿ ನಮ್ಮ ಕರ್ನಾಟಕ ಅಖಂಡ ಕರ್ನಾಟಕ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ತುಂಬಿರುವ ಕರ್ನಾಟಕ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಬಿ.ವಿ. ನಂದೀಶ್, ವಿವಿಧ ಸಂಘಟನೆಯ ಮುಖ್ಯಸ್ಥರಾದ ಮಂಜುನಾಥ್. ನಾರಾಯಣ್. ಸಂದೇಶ, ಕನ್ನಡ ಸಾಹಿತ್ಯ ಪರಿಷತ್ತಿನ ಹರ್ಷ. . ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ