ಗದ್ದೇಭೂವನಹಳ್ಳಿ ದೇವರಾಜು
ಪತ್ರಕರ್ತರು, ನಾಗಮಂಗಲ
ಹೌದು ಸಾಹಿತ್ಯ ಸಮ್ಮೇಳನ ಎಂದರೆ ಮಡಿವಂತರ ಪಾರುಪತ್ಯ ಎಂಬ ಮಾತು ಈಗಿನದಲ್ಲ ಭಾರತ ಇತಿಹಾಸ ಕೆದಕಿದರೆ ಶೂದ್ರ ವರ್ಗಗಳಿಗೆ ಅಕ್ಷರ ಕಲಿಯುವ ಹಕ್ಕು ಕೂಡ ನಿಷೇದ ವಿತ್ತು ಭಾರತಕ್ಕೆ ಬ್ರಿಟಿಷರು ಬಂದು ಕ್ರೈಸ್ತ ಮಿಷನರಿಗಳು ತೆರದ ಶಾಲೆಗಳಿಂದ ಬ್ರಾಹ್ಮಣರ ಹೊರತಾಗಿ ವಿದ್ಯೆ ಕಲಿಯುವ ಸಣ್ಣದೊಂದು ಅವಕಾಶಗಳು ತೆರೆದುಕೊಂಡವು. ತಾವು ಮನುಷ್ಯರಿಗಿಂತ ಕೀಳಾಗಿ ಬದುಕುತ್ತಿದ್ದೇವೆ ಎಂಬ ಅರಿವೇ ಇಲ್ಲದ ಕಾರಣ ಎಸ್ಸಿ ಎಸ್ಟಿ ಒಬಿಸಿ ಜನರು ಕೂಡ ಗುಲಾಮಿ ಸ್ಥಿತಿಯಿಂದ ಹೊರಬರಲು ಅವರ ಮೆದುಳಿಗೆ ಹಾಕಿದ ಬೇಡಿಯಿಂದ ಬಿಡಿಸಿಕೊಳ್ಳುವ ಪ್ರಯತ್ನ ಆರಂಭವಾಗಲು ಶಿಕ್ಷಣ ಕ್ರಾಂತಿಯ ದೊಡ್ಡ ಹೋರಾಟಗಳೆ ಆಗಿವೆ.
ಅದು ಈಗಲೂ ಕೂಡ ನಡೆಯುತ್ತಲೇ ಇದೆ ಇಲ್ಲಿ ವಿಷಯ ಏನಪ್ಪಾ ಅಂದ್ರೆ ಸಾಹಿತ್ಯ ಸಮ್ಮೇಳನದಲ್ಲಿ ತಂಬಾಕು ಸಿಗರೇಟಿನಂತಹ ದುಶ್ಚಟಗಳ ಪಟ್ಟಿಗೆ ಮಾಂಸಾಹಾರ ಸೇರಿಸಿ. ನಿಷೇದ ಆದೇಶ ಮಾಡಿದ ಸಾಹಿತ್ಯ ಪರಿಷತ್ ಅಧ್ಯಕ್ಷ ಜೋಷಿ ನಡೆ, ದೇಶದ 80% ಜನರ ಆಹಾರವಾದ ಬಾಡೂಟ ನಿಷೇದ ಮತ್ತು ಅದರ ಹಿಂದಿರುವ ಮಸಲತ್ತುಗಳ ಸೂಕ್ಷ್ಮವಿಷಯವನ್ನು ಗ್ರಹಿಸಿ ತಟ್ಟನೆ ಪ್ರತಿರೋಧ ಒಡ್ಡಿದ ನಮ್ಮ ಮಂಡ್ಯ ಪ್ರಗತಿಪರ ಹೋರಾಟಗಾರರ ನಡೆ ಮೆಚ್ಚಲೇ ಬೇಕು.
ರಾಜ್ಯದಲ್ಲಿ ನಡೆದ 86 ಸಮ್ಮೇಳನದಲ್ಲಿ ಅರಿವಿಗೆ ಬಾರದ ಈ ಅಹಾರ ಅಸ್ಪೃಶ್ಯತೆ ಅಪ್ಪಟ ಕನ್ನಡ ನೆಲ ಒಕ್ಕಲಿಗರ ಬಾಹುಳ್ಯದ ಮಂಡ್ಯದಲ್ಲಿ ನಡೆಯುತ್ತಿರುವ 87ನೇ. ಸಮ್ಮೇಳನದಲ್ಲಿ ಮುನ್ನೆಲೆಗೆ ಬಂದಿದೆ.
ಇದು ರಾಜ್ಯಾದ್ಯಂತ ಪರ ವಿರೋಧ ಚರ್ಚೆಗೆ ಎಡೆಮಾಡಿದೆ, ಇದು ಕೂಡ ಪ್ರಜಾಪ್ರಭುತ್ವ ಸಂವಿಧಾನದಲ್ಲಿ ಜನತೆಗೆ ಇರುವ ಹಕ್ಕಾಗಿದೆ.
ವಿವಿಧ ಜಾತಿ ಧರ್ಮ ಸಂಸ್ಕೃತಿ ಇರುವ ಭಾರತದಲ್ಲಿ ಧರ್ಮ ದ್ವೇಷ , ಜಾತಿಯ ತಾರತಮ್ಯ ತಾಂಡವಾಡುತ್ತಿದೆ, ಅದು ಅಹಾರ ಭೇದವನ್ನು ಬಿಟ್ಟಿಲ್ಲ, ಸಸ್ಯಹಾರಿಗಳೇ ಶ್ರೇಷ್ಠರು ಮತ್ತು ಚುರುಕು ಬುದ್ದಿಯವರು ಮಾಂಸಾಹಾರಿಗಳು. ದಡ್ಡರು ಕೀಳು ಮಟ್ಟದ ಜನರು ಎಂಬಷ್ಟರ ಮಟ್ಟಿಗೆ ಸಾಮಾನ್ಯ ಜನತೆಯ ಮೆದುಳಿಗೆ ತುಂಬಲಾಗಿದೆ ಹಾಗಾಗಿ ದೇವರು, ಪೂಜೆ, ಶಾಸ್ತ್ರ ಸಂಪ್ರದಾಯ ನೆಪದಲ್ಲಿ ಮಾಂಸಾಹಾರ ಕೀಳೆಂದು ನಂಬಿಸಿ ಅಘೋಷಿತ ನಿಷೇದ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಲಾಗಿದೆ
ಇದರಿಂದಾಗಿಯೇ ಸಾರ್ವಜನಿಕ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾಂಸಾಹಾರ ನಿಷೇದ ಎಂಬ ಮೌಖಿಕ ಆದೇಶ ಚಾಲ್ತಿಯಲ್ಲಿದೆ. ಅದರೆ ಮಂಡ್ಯ ನೆಲದಲ್ಲಿನ ಸಮ್ಮೇಳನದಲ್ಲಿ ಅಧಿಕೃತ ಆದೇಶ ಮತ್ತು ಘೋಷಣೆಯಾಗಿ ಹೊರಬೀಳುವ ಮೂಲಕ ಬ್ರಾಹ್ಮಣ್ಯದ ಮನಸ್ಥಿತಿಗಳು ಪ್ರಾಬಲ್ಯ ಸಾಧಿಸುವ ಹಂತಕ್ಕೆ ಬಂದು ನಿಂತಿವೆ ಅಷ್ಟೇ.
ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಬಯಸುವ ಜನರು ಸಸ್ಯಹಾರ ಬೇಡ ಮೂರು ದಿನವೂ ಮಾಂಸದೂಟವೆ ನೀಡಿ ಎಂದು ಕೇಳಿಲ್ಲ ಬದಲಾಗಿ ಒಂದು ಸಮಯದ ಊಟಕ್ಕಾದರೂ ಮಂಡ್ಯ ನೆಲದ ಬಾಡೂಟ ಕೊಟ್ಟು ವಿವಿಧ ಭಾಗಗಳಿಂದ ಆಗಮಿಸಿರುವ ಸಾಹಿತ್ಯಾಸಕ್ತರಿಗೆ ಮಂಡ್ಯ ಆಹಾರ ಸಂಸ್ಕೃತಿಯ ಶ್ರೇಷ್ಠತೆ ಪರಿಚಯಿಸಲು ಅವಕಾಶ ಕೊಡಿ ಈ ಮೂಲಕ ಅಹಾರ ಸಮಾನತೆಗೆ ನಾಂದಿ ಹಾಡೋಣ ಎಂದು ಪ್ರಗತಿಪರರು ಬೇಡಿಕೆ ಇಟ್ಟು ಹೋರಾಟ ಮಾಡುತ್ತಿದ್ದಾರೆ ಅಷ್ಟೇ,
ಇಲ್ಲಿ ಯಾರನ್ನೂ ಕೀಳೆಂದು ನಾವೇ ಮೇಲೆಂದು ಜರಿಯುತ್ತಿಲ್ಲಾ. ಕೆಲವರು ಆಹಾರ ಶ್ರೇಷ್ಠತೆಯ ತಪ್ಪು ಕಲ್ಪನೆಯ ಮನಸ್ಥಿತಿಯವರು ಇದಕ್ಕೆ ಕೊಂಕು ಮಾತನಾಡುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಆರಂಬಿಸಿದಾಗಲೂ ಇದಕ್ಕೆ ಭಾರಿ ವಿರೋಧ ಎದುರಾಗಿತ್ತು, ಬಡಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಮೊಟ್ಟೆ ಕೊಡಬೇಕು ಎಂದಾಗಲೂ ಅದೇ ವಿರೋಧ ವ್ಯಕ್ತವಾಗಿದ್ದವು ಆದರೂ ಅವು ಸಾರ್ವಜನಿಕ ವ್ಯವಸ್ಥೆಯಲ್ಲಿ ಸರ್ಕಾರಿ ಕಾನೂನುಗಳು ಮೂಲಕ ಜಾರಿಯಾಗಿ ಜನಪರ ಕಾರ್ಯಕ್ರಮಗಳಾಗಿ ಸರ್ಕಾರಕ್ಕೆ ಹೆಸರು ತಂದಿವೆ
ಇದು ಕೂಡ ಸಮಾಜದಲ್ಲಿನ ಜಾತಿ ವ್ಯವಸ್ಥೆಗೆ ಮತ್ತು ಮತ್ತು ಅಹಾರ ತಾರತಮ್ಯಕ್ಕೆ ಸೆಡ್ಡು ಹೊಡೆದು ಜನಪ್ರಿಯ ಯೋಜನೆಗಳಾಗಿ ನಮ್ಮ ಮುಂದೆ ಸಾಕ್ಷಿಯಾಗಿವೆ
ಮಂಡ್ಯದ ವಿವಿಧ ಪ್ರಗತಿಪರ ಸಂಘಟನೆ ನಾಯಕರು ಎತ್ತಿರುವ ಅಹಾರ ಅಸ್ಪೃಶ್ಯತೆ ವಿಚಾರವನ್ನು ಸಾಹಿತ್ಯ ಸಮ್ಮೇಳನಕ್ಕೆ ಮಾಡುತ್ತಿರುವ ಅಪಮಾನ ಎಂದು ಬಿಂಬಿತ ಮಾಡಿ ಈ ವಿಷಯವನ್ನು ತಣ್ಣಗಾಗಿಸಲು ಎಲ್ಲಾ ಪ್ರಯತ್ನಗಳೂ ನಡೆದಿವೆ ಆದರೆ ಇದಕ್ಕೆಲ್ಲಾ ಜಗ್ಗದ. ಹೋರಾಟಗಾರರನ್ನು ಜಿಲ್ಲಾಡಳಿತ ಮತ್ತು ಸರ್ಕಾರದ ಪ್ರತಿನಿಧಿಯಾಗಿ ಸಚಿವರು ಕರೆದು ಮಾತನಾಡಿ ಮೊಟ್ಟೆ ನೀಡಲು ತಾತ್ವಿಕ ಒಪ್ಪಿಗೆ ಕೊಟ್ಟಿದ್ದಾರೆ ಇದು ಆಹಾರ ಸಮಾನತೆ ಹೋರಾಟಕ್ಕೆ ಸಿಕ್ಕ ಆರಂಭಿಕ ಜಯ.
ಆಹಾರ ಸಮಾನತೆ ಹೋರಾಟ ಮುನ್ನೆಲೆಗೆ ಬಂದು ಜಾಗೃತಗೊಂಡ ಜನರು ತಾವೇ. ಮಾಂಸಾಹಾರ ತಂದು ಸಮ್ಮೇಳನದಲ್ಲಿ. ಆರಂಭದ ದಿನಗಳಿಂದಲೂ ಬಹಿರಂಗವಾಗಿ ತಿನ್ನುವ ಮೂಲಕ ಮಡಿವಂತಿಕೆ ಸಾಹಿತ್ಯ ಸಮ್ಮೇಳನಕ್ಕೆ ಸೆಡ್ಡು ಹೊಡೆದಿದ್ದಾರೆ.
ಸಸ್ಯಾಹಾರ, ಮಾಂಸಾಹಾರ ಎರಡು ಬಗೆಯ ಊಟ ಬಡಿಸುವ ಬೀಗರ ಊಟ ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಉಂಡೆದ್ದು ಬರುವುದನ್ನು ಒಪ್ಪುವ ಸಮಾಜ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ
ಬಾಡೂಟ ನೀಡುವ ಆಹಾರ ಸಮಾನತೆ ಒಪ್ಪಿತವಾಗುವುದಿಲ್ಲವೇ….
ತೊಲಗಲಿ ಆಹಾರ ಅಸ್ಪೃಶ್ಯತೆ ಮೊಳಗಲಿ ಆಹಾರ ಸಮಾನತೆ….




