Friday, October 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಒಳಮೀಸಲಾತಿ, ಜಾತಿಗಣತಿ ಜಾರಿಗೆ ಒತ್ತಾಯ

ರಾಜ್ಯದ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಂಬಂಧ ಎ.ಜೆ.ಸದಾಶಿವ ಆಯೋಗದ ವರದಿ ಹಾಗೂ ಜಾತಿ ಜನಗಣತಿ, ಹೆಚ್.ಕಾಂತರಾಜ್ ಆಯೋಗದ ವರದಿಗಳನ್ನು ಜಾರಿ ಮಾಡುವಂತೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂ ನ್ಯಾಯಾಲಯ ಆದೇಶ ನೀಡಿದ್ದರೂ ರಾಜ್ಯ ಸರ್ಕಾರ ಜಾರಿಗೆ ಮುಂದಾಗದೇ ಇದುರುವುದು ಸರಿಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೆಚ್.ಕಾಂತರಾಜು ಆಯೋಗ ರಚಿಸಿ ಜಾತಿ ಗಣತಿ ನಡೆಸಿದ್ದು, ಯಾವ ಜಾತಿ ಶೈಕ್ಷಣಿಕ, ಆರ್ಥಿಕ, ಅಭಿವೃದ್ಧಿ ಹೀನವಾಗಿದೆ ಎಂಬುದನ್ನು ಗುರುತಿಸಿದ್ದು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಈ ವರದಿಗಳ ಬಗ್ಗೆ ಸಚಿವ ಸಂಪುಟ ಹಾಗೂ ವಿಧಾನಸಭೆಯಲ್ಲಿ ಚರ್ಚಿಸಿ ಶೋಷಿತ ಸಮುದಾಯಕ್ಕೆ ಸಮಬಾಲು, ಸಮಪಾಲು ನೀಡುವ ಗುರುತರ ಜವಾಬ್ದಾರಿ ಮೆರೆಯುವಂತೆ ಆಗ್ರಹಿಸಿದರು.

ರಾಜ್ಯ ಸರ್ಕಾರವು ತಳಸಮುದಾಯಗಳ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಾಶ ಮಾಡುಲು ಹೋರಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಾತಿ ಜನಗಣತಿ ವರದಿ ಮತ್ತು ಒಳ ಮೀಸಲಾತಿ ವರದಿಯನ್ನು ಜಾರಿ ಮಾಡಬೇಕು ಇಲ್ಲವಾದರೆ ಖುರ್ಚಿ ಕಾಲಿ ಮಾಡುವಂತೆ ಒತ್ತಾಯಿಸಿದರು.
ಡಿ.೦೬ರಂದು ಅಂಬೇಡ್ಕರ್ ೬೨ನೇ ಪರಿನಿಬ್ಬಾಣ ದಿನ ನಡೆಯುವುದರ ಒಳಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಹಾಗೂ ಜಾತಿ ಗಣತಿಯ ವರದಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಕೆರಗೋಡು, ಉಪಾಧ್ಯಕ್ಷ ಬಿ.ಆನಂದ್, ಪುಟ್ಟಸ್ವಾಮಿ, ಮುತ್ತುರಾಜ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!