Monday, November 23, 2026

ಪ್ರಾಯೋಗಿಕ ಆವೃತ್ತಿ

ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಬಾಕಿ ; ಮಾಹಿತಿ ನೀಡಿದ ಕೃಷ್ಣಬೈರೇಗೌಡ

ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಮತ್ತು ಕುಟುಂಬ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ರೂ. 4.85 ಕೋಟಿ ಮಾಸಿಕ ಸಂಭಾವನೆ ಪಾವತಿಸಲು ಬಾಕಿ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಮಾಸಿಕ ಗೌರವ ಸಂಭಾವನೆಯನ್ನು ಪಾವತಿಸಿದೆ ಇರುವುದರಿಂದ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಮತ್ತು ಕುಟುಂಬ ಮಾಸಾಶನ ಪಡೆಯುತ್ತಿರುವವರಿಗೆ ತೀವ್ರ ತೊಂದರೆ ಆಗಿರುವ ಕುರಿತು ಶಾಸಕ ಮಧು ಜಿ.ಮಾದೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕುಟುಂಬ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಮಾಸಿಕ 10 ಸಾವಿರ ರೂ. ಗೌರವ ಸಂಭಾವನೆ ಪಾವತಿಸಲಾಗುತ್ತಿದೆ. ಚಾಮರಾಜನಗರ, ಹಾಸನ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾಸಿಕ ಸಂಭಾವನೆ ಪಾವತಿಸಲು ಬಾಕಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಯಾವ ಜಿಲ್ಲೆ, ಎಷ್ಟು ಬಾಕಿ?

ಬೆಳಗಾವಿ –ರೂ. 83,34 ಲಕ್ಷ, ಧಾರವಾಡ – ರೂ. 76.33 ಲಕ್ಷ, ಬೆಂಗಳೂರು (ನಗರ) – ರೂ.59.02 ಲಕ್ಷ, ಶಿವಮೊಗ್ಗ –ರೂ.39.30 ಲಕ್ಷ, ತುಮಕೂರು –ರೂ.36.40 ಲಕ್ಷ, ಹಾವೇರಿ –ರೂ.29.99 ಲಕ್ಷ, ಮಂಡ್ಯ – 19.70 ಲಕ್ಷ, ಚಿತ್ರದುರ್ಗ – ರೂ.18.14 ಲಕ್ಷ, ಬೀದರ್ – 17.17 ಲಕ್ಷ, ಉತ್ತರ ಕನ್ನಡ – ರೂ.17.12 ಲಕ್ಷ, ಕೋಲಾರ – ರೂ. 14.50 ಲಕ್ಷ, ಮೈಸೂರು – ರೂ.12.00 ಲಕ್ಷ, ಕಲಬುರಗಿ – ರೂ.10.79 ಲಕ್ಷ, ವಿಜಯನಗರ ಮತ್ತು ಗದಗ – ರೂ. 9.2 ಲಕ್ಷ, ದಕ್ಷಿಣ ಕನ್ನಡ – ರೂ. 6.7 ಲಕ್ಷ, ಚಿಕ್ಕಬಳ್ಳಾಪುರ –ರೂ. 5.3 ಲಕ್ಷ, ವಿಜಯಪುರ – ರೂ. 5.13 ಲಕ್ಷ, ಚಿಕ್ಕಮಗಳೂರು – ರೂ. 4.7 ಲಕ್ಷ, ರಾಯಚೂರು –ರೂ.1.3 ಲಕ್ಷ, ಕೊಪ್ಪಳ – ರೂ. 3.5 ಲಕ್ಷ, ಬೆಂಗಳೂರು (ಗ್ರಾ) ರೂ. 3.4 ಲಕ್ಷ, ಬಳ್ಳಾರಿ – ರೂ. 1.3 ಲಕ್ಷ, ರಾಮನಗರ ರೂ. 90 ಸಾವಿರ, ಕೊಡಗು – ರೂ. 80 ಸಾವಿರ, ಬಾಗಲಕೋಟೆ ರೂ. 33 ಸಾವಿರ, ದಾವಣಗೆರೆ ರೂ. 10 ಸಾವಿರ

ಜೀವಂತವಿರುವ ಸ್ವಾತಂತ್ರ್ಯ ಹೋರಾಟಗಾರರು 150

ಬಳ್ಳಾರಿ, ಬೆಂಗಳೂರು (ಗ್ರಾ), ಚಾಮರಾಜನಗರ, ವಿಜಯಪುರ, ಉಡುಪಿ, ಕೊಡಗು, ಕೋಲಾರ, ಹಾವೇರಿ, ಗದಗ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಒಟ್ಟು 10 ಜಿಲ್ಲೆಗಳಲ್ಲಿ ಜೀವಂತವಿರುವ ಸ್ವಾತಂತ್ರ್ಯ ಹೋರಾಟಗಾರರ ಯಾರೂ ಇಲ್ಲ. ಆದರೆ, ಪ್ರಸ್ತುತ ವಿವಿಧ ಜಿಲ್ಲೆಗಳಲ್ಲಿ ಜೀವಂತವಿರುವ, ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಪಡೆಯುತ್ತಿರುವ ಫಲಾನುಭವಿಗಳ ಒಟ್ಟು ಸಂಖ್ಯೆ 150 ಇದೆ ಎಂದೂ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ