Friday, November 20, 2026

ಪ್ರಾಯೋಗಿಕ ಆವೃತ್ತಿ

‘ನಾಡು ನುಡಿ ಸೇವೆಗೆ ನನಗೆ ಇನ್ನೂ ಚಿಕ್ಕ ವಯಸ್ಸಾಗಿದ್ದರೆ, ಹೆಚ್ಚು ಖುಷಿ ಆಗುತ್ತಿತ್ತು’ ; ಗೊ.ರು.ಚನ್ನಬಸವಪ್ಪ

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಾಡಿನ ಕನ್ನಡ ಪ್ರೇಮಿಗಳು, ಕನ್ನಡದ ಹೋರಾಟಗಾರರು ದಿನನಿತ್ಯ ಬಂದು ಅಭಿನಂದಿಸುತ್ತಿರುವುದು ನನಗೆ ತುಂಬಾ ಸಂತೋಷವೆನಿಸಿದೆ, ಕನ್ನಡ ನಾಡು ನುಡಿಯ ಸೇವೆಯಲ್ಲಿ ಮಾಡಲು ನನಗೆ ಇನ್ನೂ ಚಿಕ್ಕ ವಯಸ್ಸಾಗಿದ್ದರೆ ಇನ್ನೂ ಖುಷಿ ಅನಿಸುತ್ತಿತ್ತು ಎಮದು ಗೊ.ರು.ಚನ್ನಬಸಪ್ಪ ನುಡಿದಿದ್ದಾರೆ.

ಕನ್ನಡ ಸೇನೆ ವತಿಯಿಂದ ಬೆಂಗಳೂರಿನ ನಿವಾಸದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಇಂದು ನನ್ನನ್ನ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು.  ಕನ್ನಡದ ಕೆಲಸ ಮಾಡಲು ನನಗೆ ತುಂಬಾ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್ ಮಾತನಾಡಿ, ಗೊ.ರು. ಚೆನ್ನಬಸಪ್ಪ ಅವರನ್ನು ಸಮ್ಮೇಳನ ಅಧ್ಯಕ್ಷರಾಗಿ ಮಾಡಿರುವುದು ಕನ್ನಡ ನಾಡಿನ ಹೆಮ್ಮೆಯ ವಿಷಯ. ಐದು ದಶಕಗಳಿಗೂ ಹೆಚ್ಚು ಶಿಕ್ಷಣ ತಜ್ಞರಾಗಿ ಕನ್ನಡದ ಪ್ರೇಮಿಯಾಗಿ, ಸಾಹಿತಿಯಾಗಿ, ವಚನಕಾರರಾಗಿ ನಿರಂತರವಾಗಿ ನಾಡಿನ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ನಾವೆಲ್ಲರೂ ಸೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಮಂಡ್ಯ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಅತಿ ಹೆಚ್ಚು ಕನ್ನಡ ಮಾತನಾಡುವ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಉಳಿಸಬೇಕಾಗಿದೆ. ಈಗಾಗಲೇ 300ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿರುವಂತದ್ದು ಬೇಸರ ತಂದಿದೆ. ಕನ್ನಡ ಭಾಷೆ ಅವಲಂಬಿತ ಜಿಲ್ಲೆಗಳಲ್ಲಿ ಈ ತರದ ಸ್ಥಿತಿಯಾದರೆ ಗಡಿ ಭಾಗದ ಜಿಲ್ಲೆಗಳ ಗತಿ ಏನು ? ಸರ್ಕಾರಿ ಶಾಲೆ ಉಳಿವಿಗಾಗಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಸಮ್ಮೇಳನದ ಅಧ್ಯಕ್ಷರಿಗೆ ಮನವಿ ಮಾಡಿದರು.

ಕನ್ನಡ ಸೇನೆ ಕಾರ್ಯಧ್ಯಕ್ಷ ಮಂಡಿಬೆಟ್ಟಳ್ಳಿ ಮಂಜುನಾಥ್, ರಾಜ್ಯ ಸಂಚಾಲಕರಾದ ಎಲ್ ಎನ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಂಬರೀಶ್ ಗೌಡ, ರಾಜ್ಯ ಸಂಚಾಲಕ ಮಹಾಂತಪ್ಪ, ಜಿಲ್ಲಾ ಸಂಚಾಲಕರದ ವೇಣುಗೋಪಾಲ್, ಪ್ರದೀಪ್ ಹಾಗೂ ದರ್ಶನ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ