ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಮೀನು ಹಿಡಿಯಲು ಸೋಮವಾರ ಮುಂಜಾನೆ ಹೋದ ರಾಮಚಂದ್ರನಾಯಕ ಅವರ ಬಲೆಗೆ ಬಂಗಾರದ ಬಣ್ಣದ ಮೀನು ಬಿದ್ದಿದೆ. ಇದರ ವಿಷಯ ತಿಳಿದು ಸುತ್ತಮುತ್ತಲು ಜತನೆ ಮೀನನ್ನು ನೋಡಲು ಮುಗಿ ಬಿದ್ದಿದ್ದಾರೆ.
ಬಲೆಗೆ ಬಿದ್ದಿದ್ದ 4 ಕೆ.ಜಿ.ತೂಕವಿದ್ದ ಬಂಗಾರ ಬಣ್ಣದ ಗೌರಿ ಮೀನನ್ನು ವಳಗೆರೆ ಮೆಣಸದ ರಾಜು ಎಂಬುವರು ಅವರು 04 ಕೆಜಿ ತೂಕವಿದ್ದ ಗೌರಿ ಮೀನನ್ನು ಒಂದು ಸಾವಿರ ರೂಪಾಯಿ ನೀಡಿ ಖರೀದಿಸಿದರು.
ಬಂಗಾರ ಬಣ್ಣದ ಗೌರಿ ಮೀನು ಅಪರೂಪದ ತಳಿಯಾಗಿದ್ದು ಮುಳ್ಳುಗಳಿಲ್ಲದ ತಿನ್ನಲು ರುಚಿಕರವಾದ ಈ ಮೀನು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿದೆ ಎಂದು ಮೀನು ಮಾರಾಟಗಾರ ಬಲೆ ರಾಮು ತಿಳಿಸಿದ್ದಾರೆ




