Friday, June 21, 2024

ಪ್ರಾಯೋಗಿಕ ಆವೃತ್ತಿ

ರಾಷ್ಟ್ರೀಯ ಜಲನೀತಿ ರೂಪಿಸುವಲ್ಲಿ ಸರ್ಕಾರಗಳು ವಿಫಲ: ವೆಂಕಟಗಿರಿಯಯ್ಯ

ರಾಷ್ಟ್ರೀಯ ಜಲನೀತಿ ಸೂಪಿಸುವಲ್ಲಿ ದೇಶವನ್ನಾಳಿದ ಕಾಂಗ್ರೆಸ್, ಬಿಜೆಪಿ, ಜನತಾದಳ ರಾಜಕೀಯ ಪಕ್ಷಗಳು ವಿಫಲವಾಗಿವೆ. ರಾಜ್ಯದ ಕಾವೇರಿ, ಕೃಷ್ಣ, ಮಹದಾಯಿ ನದಿ ವಿವಾದ ಪರಿಹಾರಕ್ಕೆ ನ್ಯಾಯಾಲಯಗಳಿಂದ ಸಾಧ್ಯವಿಲ್ಲ, ರಾಷ್ಟ್ರೀಯ ಜಲನೀತಿಯೇ ಪರಿಹಾರವೆಂದು ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.

ಮಂಡ್ಯ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯಿಂದ ನಡೆದ ಡಾ.ಅಂಬೇಡ್ಕರ್ ಅವರ 133ನೇ ವರ್ಷದ ಜನ್ಮದಿನೋತ್ಸವ ಮತ್ತು ಮಂಡ್ಯ ಜಿಲ್ಲಾ ಸ್ವಾಭಿಮಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ತತ್ಕಾಲಿಕ ಪರಿಹಾರದ ಗ್ಯಾರಂಟಿ ನೀಡುತ್ತಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಈವರೆಗೂ ದೇಶವನ್ನಾಳಿ ವಿದ್ಯೆ-ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲಾಗಲಿಲ್ಲ, ಈ ದೇಶದ ಸಂಪತ್ತನ್ನು ಸಮಾನ ಹಂಚಿಕೆ ಮಾಡಲಾಗಲಿಲ್ಲ. ಈ ದೇಶದ ಬಹುಜನರು ಕೆಲವೇ..ಜನರು ಶ್ರೀಮಂತಿಕೆಯ ಐಸಾರಾಮಿ ಜೀವನ ನಡೆಸಲು ಸೇವಕಾರಾಗಿರಬೇಕಾ? ಇದು ಪ್ರಜಾತಂತ್ರ ವ್ಯವಸ್ಥೆಯ ಎಂದು ಪ್ರಶ್ನಿಸಿದರು.

ಭಾರತ ಸಂವಿಧಾನಾತ್ಮಕವಾಗಿ ರಾಜಕೀಯ ಸಮಾನತೆ ಮಾತ್ರವಿದೆ, ಸಾಮಾಜಿಕ ಆರ್ಥಿಕ ಅಸಮಾನತೆ ಅಂತ್ಯವಾಗದೇ ನೈಜ್ಯ ಪ್ರಜಾಪ್ರಭುತ್ವ ಸ್ಥಾಪನೆಯಾಗದೆಂದು ಬಾಬಾ ಸಾಹೇಬರೇ ಹೇಳಿದ್ದಾರೆ. ಸರ್ವ ಸಮಾನತೆಗಾಗಿ ನಮ್ಮ ಹೋರಾಟ ಮುಂದುವರಿಸೋಣವೆಂದು ಕರೆ ನೀಡಿದರು.

ಮೈಸೂರು ವಿಭಾಗೀಯ ಸಂಚಾಲಕರಾದ ಕೆ.ಎಂ.ಅನಿಲ್ ಕುಮಾರ್ ಕೆರಗೋಡು ಪ್ರಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾಧ್ಯಕ್ಷರಾದ ಕೆ.ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಹೊನ್ನಪ್ಪ ಗಂಗನಾಳ, ಸುಭಾಷಸ್ ತಳವಾರ, ಭಾಗ್ಯಮ್ಮ ತಾಲ್ಲೂಕು ಅಧ್ಯಕ್ಷರಾದ ಬಿ.ಆನಂದ್, ಬಲರಾಮ, ಮುನಿರಾಜ್ ಸೋಮಶೇಖರ್ ಮೇನಾಗ್ರ ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!