ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿ ಚಂದಗಾಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಮಂಜುಳಾ ರಾಜಶೇಖರ್ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಉಪಾಧ್ಯಕ್ಷೆ ಸುನೀತಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಿಂದಾಗಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.
16 ಸದಸ್ಯ ಬಲವುಳ್ಳ ಗ್ರಾ.ಪಂ.ನಲ್ಲಿ ನಡೆದ ಚುನಾವಣೆಯಲ್ಲಿ ಮಂಜುಳಾ ರಾಜಶೇಖರ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿ ಇಓ ಎಂ.ಎಸ್.ವೀಣಾ ಅವಿರೋಧ ಆಯ್ಕೆ ಪ್ರಕಟಿಸಿದರು.
ಗ್ರಾಪಂ ಸದಸ್ಯರಾದ ಕೃಷ್ಣೇಗೌಡ, ಎಂ.ಜಿ.ಅರ್ಜುನ, ಎಚ್.ಸಿ.ಅಜಯ್, ಚಿಕ್ಕಬೋರಯ್ಯ, ಲಕ್ಷ್ಮಿ ಇಂದ್ರಮ್ಮ, ಶಾಂಭವಿ ಮತ್ತಿತರರು ನೂತನ ಉಪಾಧ್ಯಕ್ಷೆ ಮಂಜುಳಾ ರಾಜಶೇಖರ್ ಅವರನ್ನು ಅಭಿನಂದಿಸಿದರು.