Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಮುದಾಯ ಭವನದ ಅಭಿವೃದ್ದಿಗೆ ಅನುದಾನ : ಅನ್ನದಾನಿ

ಶ್ರೀರಾಮ ಒಕ್ಕಲಿಗರ ಸಮುದಾಯಭವನದ ಅಭಿವೃದ್ದಿಗೆ ಸಂಸದರಾದ ಎಚ್ ಡಿ ಕುಮಾರಸ್ವಾಮಿ ಮತ್ತು ಎಂ ಎಲ್ ಸಿ ವಿವೇಕಾನಂದ ಅವರಿಂದ ಅನುದಾನ ಕೊಡಿಸುವುದಾಗಿ ಮಾಜಿ ಶಾಸಕ ಅನ್ನದಾನಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಶ್ರೀರಾಮ ಒಕ್ಕಲಿಗರ ಸಮುದಾಯ ಭವನದಲ್ಲಿ ಸರ್. ಎಂ ವಿಶ್ವೇಶ್ವರಯ್ಯ ಯುವಕರ ಸಂಘ ಹಾಗೂ ಶ್ರೀ ರಾಮ ಒಕ್ಕಲಿಗರ ಸೇವಾ ಸಂಘ ವತಿಯಿಂದ ಶ್ರೀ ಪ್ರಸನ್ನ ಗಣಪತಿ ದೇವಾಲಯದ 48 ನೇ ದಿನದ ‌ಮಂಡಲ ಪೂಜಾ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಬಡವರಿಗೆ ಕಡಿಮೆ ದರದಲ್ಲಿ ಮದುವೆ ಸಮುದಾಯ ಭವನ ನೀಡಿದರೆ ಅನುಕೂಲವಾಗಲೆಂದು ಮತ್ತು ಸಮುದಾಯ ಭವನ ನಿರ್ಮಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಇದೇ ವೇಳೆ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಹಲವು ವರ್ಷಗಳಿಂದ ಯಜಮಾನರು ಮತ್ತು ಯುವಕರ ಕ್ಷಣದಿಂದ ಹೊಸದಾಗಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಸ್ಪಚ್ಚತೆ ಯಿಂದ ಇಟ್ಟುಕೊಂಡು ಭವನವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ನಂದಕುಮಾರ್ ಪ್ರಶಾಂತ್. ಸಿದ್ದರಾಜು. ಬಸವರಾಜು ವಿಶ್ವೇಶ್ವರಯ್ಯ ಯುವಕರ ಸಂಘ ಅಧ್ಯಕ್ಷ ಚಿಕ್ಕಮರಿ, ಮುಖಂಡರಾದ ಎಂ.ಹೆಚ್. ಕೆಂಪಯ್ಯ, ಪುಟ್ಟರಾಜು.ಪತಂಡೆನಾಗರಾಜು, ಚಿಕ್ಕ ರಾಜು. ಬಸವರಾಜು. ಸಿದ್ದಣ್ಣ. ಶಾಫಿ , ಮರಿದೇವರು ಸೇರಿದಂತೆ ಹಲವರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ