Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸೆ.1ರಿಂದ ಗುರುದೇವೋತ್ಸವ; ಶಾಸ್ತ್ರೀಯ ನೃತ್ಯೋತ್ಸವ

ಮಂಡ್ಯದ ಗುರುದೇವ ಲಲಿತಕಲಾ ಅಕಾಡೆಮಿಯ ರಜತ ಸಂಭ್ರಮದ ಅಂಗವಾಗಿ ‘ಗುರುದೇವೋತ್ಸವ ಹಾಗೂ ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮವನ್ನು ಸೆ.1ರಿಂದ 3ರವರೆಗೆ ಮಂಡ್ಯ ನಗರದ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಪಿ.ಎಂ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುದೇವೋತ್ಸವದ ಅಂಗವಾಗಿ ನಾಡಿನ ಹಿರಿಯ 3 ಮಂದಿ ಕಲಾವಿದ-ಕಲಾಪೋಷಕರಿಗೆ ‘ಗುರುದೇವ’ ಪ್ರಶಸ್ತಿ ಪ್ರದಾನ ಹಾಗೂ ವೈವಿಧ್ಯಮಯ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ. ಕೇಂದ್ರ ಸರಕಾರದ ಮಿನಿಷ್ಟ್ರಿ ಆಪ್ ಕಲ್ಟರ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಮೂರು ದಿನಗಳ ‘ಗುರುದೇವೋತ್ಸವ’ದಲ್ಲಿ ರಾಷ್ಟ್ರಮಟ್ಟದ ಕಲಾವಿದರು ಹಾಗೂ ಕಲಾಪೋಷಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಸೆ.1ರ ಸಂಜೆ 4.30ಕ್ಕೆ ಮಂಡ್ಯದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಎನ್. ಚಲುವರಾಯಸ್ವಾಮಿ ನೆರವೇರಿಸಲಿದ್ದಾರೆ, ಅಧ್ಯಕ್ಷತೆಯನ್ನು ಶಾಸಕ ಪಿ ರವಿ ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಡಾ.ನಂದಿನಿ ಕೇಶವ್, ಸಾಹಿತಿ ತೈಲೂರು ವೆಂಕಟಕೃಷ್ಣ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಪ್ರಶಸ್ತಿ ಪ್ರದಾನ, ಏಕವ್ಯಕ್ತಿ ಪ್ರದರ್ಶನ, ಸಮೂಹ ಭರತನಾಟ್ಯ, ಪ್ರದರ್ಶನ ಇನ್ನಿತರ ಶಾಸ್ತ್ರಿಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸೆ.2ರಂದು ‘ಗುರುದೇವ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿಸಿ ತಮ್ಮಣ್ಣ ವಹಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಮನೋವೈದ್ಯ ಡಾ. ಟಿ.ಎಸ್.ಸತ್ಯನಾರಾಯಣ ರಾವ್, ಮಂಡ್ಯ ಪಿ. ಇ. ಎಸ್ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ವಿಜಯಾನಂದ, ನಗರಸಭೆ ಮಾಜಿ ಅಧ್ಯಕ್ಷ ಎಂ.ಜೆ. ಚಿಕ್ಕಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ  ಉದಯ್ ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸುವರು ಎಂದರು.

ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ಗುರುದೇವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಸಮೂಹ ಭರತನಾಟ್ಯ, ಏಕವ್ಯಕ್ತಿ ಭರತನಾಟ್ಯ, ಯಗಳ ಭರತನಾಟ್ಯ, ಶ್ರೀಗಳ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದರು.

ಸೆ.3ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಸಚಿವ ಎಂ.ಎಸ್ ಆತ್ಮಾನಂದ ಅಧ್ಯಕ್ಷತೆ ವಹಿಸುವರು. ಪ್ರೊ. ಬಿ. ಜಯಪ್ರಕಾಶ್ ಗೌಡ ಶುಭ ಹಾರೈಸುವರು. ಮುಖ್ಯ ಅತಿಥಿಗಳಾಗಿ ಸುಜೇಂದ್ರ ಬಾಬು, ಮಂಜುಳ ಉದಯ ಶಂಕರ್, ಬೇಕ್ರಿ ರಮೇಶ್‌ ಭಾಗವಹಿಸುವರು. ಗುರುದೇವ ಪ್ರಶಸ್ತಿಯನ್ನು ಸಾಯಿ ವೆಂಕಟೇಶ್, ಸೋನ ಗಣೇಶ ನಾಯಕ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ನಂತರ ಕಾವೇರಿ ವೈಭವ ನೃತ್ಯ ರೂಪಕ, ಸಮೂಹ ಭರತನಾಟ್ಯ, ಏಕವ್ಯಕ್ತಿ ಭರತನಾಟ್ಯ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ, ಈ ಕಾರ್ಯಕ್ರಮಗಳಲ್ಲಿ ಅಕಾಡೆಮಿಯ 115 ವಿದ್ಯಾರ್ಥಿಗಳು ಭಾಗವಹಿಸಲಿವೆ, ನೃತ್ಯೋತ್ಸವವು ವೈವಿಧ್ಯತೆಯಿಂದ ಕೂಡಿರಲಿದೆ, ಈ ಬಾರಿ ಹಳೇಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ, ತಂಜಾವೂರು ಶೈಲಿಯಲ್ಲಿ ಭರತ ನಾಟ್ಯ ಪ್ರಕರಣ ನಡೆಯಲಿದೆ ಎಂದರು.

ಗೋ‍ಷ್ಠಿಯಲ್ಲಿ ಕಲಾ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ, ಹಿರಿಯ ವಿದ್ಯಾರ್ಥಿಗಳಾದ ಲಾವಣ್ಯ ಹಾಗೂ ವಿದ್ಯಾಶ್ರೀ  ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ