Friday, October 11, 2024

ಪ್ರಾಯೋಗಿಕ ಆವೃತ್ತಿ

ಗುರುಗಳ ಆಶೀರ್ವಾದ ಪಡೆಯುವುದು ಪ್ರತಿಯೊಬ್ಬರ ಕರ್ತವ್ಯ

ಮನುಷ್ಯನಿಗೆ ಬುದ್ಧಿ, ಜ್ಞಾಪಕಶಕ್ತಿ ಹಾಗೂ ಯೋಚನೆ ಮಾಡುವಂತಹ ಆಶೀರ್ವಾದ ಭಗವಂತ ನೀಡಿದ್ದಾನೆ. ಇವುಗಳನ್ನು ಗುರುಗಳಿಂದ ಪಡೆಯುವ ನಾವು ಗುರು ಪೂರ್ಣಿಮೆ ದಿನ ಅವರ ಆಶೀರ್ವಾದ ಪಡೆಯುವುದು ಮುಖ್ಯ ಎಂದು ಐಟಿ, ಉನ್ನತ ಶಿಕ್ಷಣ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ತಿಳಿಸಿದರು.

ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಅವರು ಮಾತನಾಡಿದರು.

ಗುರು ಪೂರ್ಣಿಮೆಯ ಹಿನ್ನೆಲೆಯಲ್ಲಿ ಶ್ರೀ ಆದಿಚುಂಚನಗಿರಿ ಶ್ರೀಗಳ ಹಾಗೂ ಮೇಲುಕೋಟೆ ಶ್ರೀ ಚೆಲುವನಾರಾಯಣನ ಆಶೀರ್ವಾದವನ್ನು ಪಡೆದದ್ದು ಸಂತೋಷವಾಗಿದೆ ಎಂದರು.

ಹಿರಿಯರು ಹಲವಾರು ಶತಮಾನಗಳ ಹಿಂದೆ ಸಂಸ್ಕೃತ ಮತ್ತು ಧಾರ್ಮಿಕ ಅಧ್ಯಯನ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ. ಶತಮಾನಗಳಿಂದ ಬೆಳೆದು ಬಂದಿರುವ ಈ ಕೇಂದ್ರದಲ್ಲಿ ಬಹಳ ಉತ್ತಮ ಕೆಲಸಗಳು ನಡೆದಿದೆ.

ಈ ಸ್ಥಳಕ್ಕೆ ಬೇಟಿ ನೀಡಿ ಗುರುಗಳು ಹಾಗೂ ವಿದ್ವಾಂಸರ ಜೊತೆ ಮಾತನಾಡಿದ್ದು ನನ್ನ ಸೌಭಾಗ್ಯ.ಅವರ ಮಾರ್ಗ ದರ್ಶನ ಸಮಾಜಕ್ಕೆ ಅಗತ್ಯ ಎಂದು ಹೇಳಿದರು.

ವಿಶ್ವದಲ್ಲೇ ಕನ್ನಡನಾಡು ಪುಣ್ಯ ಭೂಮಿ ಎಂದು ಹೆಸರು ಪಡೆದಿದೆ. ಇದು ಇನ್ನೂ ಎತ್ತರಕ್ಕೆ ಬೆಳೆಯಬೇಕು. ಗುರು ಪೂರ್ಣಿಮಾ ಬಹಳ ವಿಶೇಷವಾದದ್ದು, ಸಮಾಜದಲ್ಲಿ ಉತ್ತಮ ನಾಗರೀಕರಾಗಲು ಗುರುಗಳ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇರಬೇಕು ಎಂದು ಹೇಳಿದರು.

ಇದೇ ವೇಳೆ ಸಂಸ್ಕೃತ ಸಂಶೋಧನಾ ಅಕಾಡೆಮಿ ಗೆ ಭೇಟಿ ನೀಡಿ ಸಂಶೋಧನಾ ವಿಭಾಗಗಳು ಹಾಗೂ ಗ್ರಂಥಾಲಯ ವೀಕ್ಷಣೆ ಮಾಡಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿ.ಪಿ‌.ಉಮೇಶ್,ಇಂದ್ರೇಶ್ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ತಹಶೀಲ್ದಾರ್ ನಯನ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!