Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಹೆಚ್.ಸಿ.ಅಭಿಲಾಷ್ ಗೆ ಪಿಎಚ್.ಡಿ. ಪದವಿ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಗ್ರಾಮದ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹೆಚ್. ಕೆ. ಚಂದ್ರಹಾಸ ಮತ್ತುಯಶೋಧ ದಂಪತಿಗಳ ಪುತ್ರ ಹೆಚ್.ಸಿ.ಅಭಿಲಾಷ್ ಅವರು ಗಣಿತಶಾಸ್ತ್ರ ವಿಷಯದಲ್ಲಿ ಡಾ. ಷಣ್ಮುಖ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘A STUDY ON SOME RESULTS ON ENERGY OF GRAPHS’ ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿಗೆ ಅಂಗೀಕರಿಸಿದೆ.

ಪ್ರಸ್ತುತ ಮಂಡ್ಯದ ಕಾವೇರಿನಗರದ ನಿವಾಸಿಯಾಗಿರುವ ಇವರು, ನಾಗಾರ್ಜುನ ಎಜುಕೇರ್, ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಅಕಾಡೆಮಿಕ್ ಡೀನ್ ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತಿದ್ದಾರೆ. ಇವರಿಗೆ ಸಂಸ್ಥೆಯ ಸಂಸ್ಥಾಪಕರಾದ ಡಾ.ಮೂರ್ತಿ, ನಾಗಾರ್ಜುನ ಎಜುಕೇರ್ ನ ನಿರ್ದೇಶಕರಾದ ಮನೋಹರ್ ನಾರಜ್ಜಿ, ಶಾಖಾಧಿಕಾರಿ ಸತೀಶ್, ಪ್ರಾಂಶುಪಾಲ ದೊಡ್ಡಚಾರ್, ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿ ವೃಂದದವರು ಅಭಿನಂದಿಸಿದ್ದಾರೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ