Tuesday, November 24, 2026

ಪ್ರಾಯೋಗಿಕ ಆವೃತ್ತಿ

ಎಚ್.ವಿಶ್ವನಾಥ್‌ ಅವರನ್ನು ಮಾನಸಿಕ ಸ್ವಾಸ್ಥ್ಯ ಕೇಂದ್ರಕ್ಕೆ ಸೇರಿಸಬೇಕು: ಬಿ.ಎಸ್.ಶಿವಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅವಾಚ್ಯ ಪದ ಬಳಕೆ ಮಾಡಿ ಟೀಕಿಸಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್‌ಗೆ ಮತಿಭ್ರಮಣೆಯಾಗಿದ್ದು, ಮಾನಸಿಕ ಸ್ವಾಸ್ಥ್ಯ ಕೇಂದ್ರಕ್ಕೆ ಸೇರಿಸಬೇಕಿದೆ ಎಂದು ರಾಮಮನೋಹ‌ರ ಲೋಹಿಯಾ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಚ್.ವಿಶ್ವನಾಥ್ ಅವರು ನೈತಿಕವಾಗಿ, ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಅಧಃಪತನಗೊಂಡಿದ್ದಾರೆ. ಅಧಿಕಾರ ರಾಜಕಾರಣಕ್ಕಾಗಿ ಯಾರ ಕಾಲು ಬೇಕಾದರೂ ಹಿಡಿಯುವ ಘನ ಪರಂಪರೆ ಸೇರಿದ್ದಾರೆ. ವಿಶ್ವನಾಥ್ ಅವರಂತಹ ಸ್ವಾರ್ಥ ಹಾಗೂ ನಿರ್ಲಜ್ಜ ರಾಜಕಾರಣಿಯನ್ನು ಕರ್ನಾಟಕ ರಾಜ್ಯವು ಇದುವರೆಗೆ ಕಂಡಿಲ್ಲ.

ಅಧಿಕಾರ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ಕಾಂಗ್ರೆಸ್ ಹೈಕಮಾಂಡ್ ಇದನ್ನು ನಿರ್ಧರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ.ಅಧಿಕಾರಕ್ಕಾಗಿ ತತ್ವ, ಸಿದ್ಧಾಂತ ಬಲಿ ಕೊಟ್ಟ ಎಚ್. ವಿಶ್ವನಾಥ್ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ‌. ಕೊಟ್ಟ ಕುದುರೆ ಏರಲಾಗದೇ ಊರೆಲ್ಲ ಅಲೆದು ನಯಾಪೈಸೆ ಮೌಲ್ಯ ಉಳಿಸಿಕೊಳ್ಳದವರಿಂದ ಸಿದ್ದರಾಮಯ್ಯ ಅವರಂತಹ ಮೌಲ್ಯಾಧಾರಿತ ರಾಜಕಾರಣಿ ಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಶಿವಣ್ಣ ತಿರುಗೇಟು ನೀಡಿದ್ದಾರೆ.

ಎಚ್.ವಿಶ್ವನಾಥ್ ತಮ್ಮ ಇತಿ-ಮಿತಿಯನ್ನು ಅರಿತುಕೊಂಡರೆ ಕ್ಷೇಮ.ಇಲ್ಲದಿದ್ದರೆ ರಾಜಕೀಯವಾಗಿ ಸವಕಲಾಗಿರುವ ನಿಮ್ಮ ನಾಲಿಗೆಯ ತೆವಲಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ