Friday, September 13, 2024

ಪ್ರಾಯೋಗಿಕ ಆವೃತ್ತಿ

ಇಸ್ರೇಲ್‌ ಜೊತೆ ಯುದ್ಧ ಒಪ್ಪಂದಕ್ಕೆ ಮುಂದಾದ ಹಮಾಸ್‌ !

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವೆ 45 ದಿನಗಳಿಂದ ಯುದ್ಧ ನಡೆಯುತ್ತಿದ್ದು, ಹಮಾಸ್ ಅಧಿಕಾರಿಗಳು ಇಸ್ರೇಲ್‌ನೊಂದಿಗೆ ಯುದ್ಧ ಒಪ್ಪಂದಕ್ಕೆ ಸಮೀಪಿಸುತ್ತಿರುವುದಾಗಿ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಹೇಳಿದ್ದಾರೆ.

ಯುದ್ಧದ ಬಗ್ಗೆ ಕತಾರ್‌ನ ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಯುತ್ತಿದೆ. ಅವರಿಗೆ ನಮ್ಮ ಪ್ರತಿಕ್ರಿಯೆಯನ್ನು ನೀಡಿರುವುದಾಗಿ ಹನಿಯೆಹ್ ಮಂಗಳವಾರ ಬೆಳಿಗ್ಗೆ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹನಿಯೆಹ್ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಆದರೆ ಕದನ ವಿರಾಮ ಎಷ್ಟು ಕಾಲ ಇರಲಿದೆ. ಗಾಝಾಕ್ಕೆ ಪರಿಹಾರ ರವಾನೆ ಬಗ್ಗೆ ಸಿದ್ದತೆ ಮತ್ತು ಒತ್ತೆಯಾಳುಗಳ ವಿನಿಮಯ ಮಾಡಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಎರಡೂ ಕಡೆಯವರು ಮಹಿಳೆಯರು ಮತ್ತು ಮಕ್ಕಳನ್ನು ಮುಕ್ತಗೊಳಿಸಿದ್ದಾರೆ. ಈ ಕುರಿತು ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸುವ ಕತಾರ್ ವಿವರಗಳನ್ನು ಘೋಷಿಸುತ್ತದೆ ಎಂದು ಎಝಾತ್ ಎಲ್-ರೇಶಿಕ್ ಹೇಳಿದ್ದಾರೆ.

ಒಪ್ಪಂದವು ಕದನ ವಿರಾಮ, ಗಾಝಾದ ಎಲ್ಲಾ ಪ್ರದೇಶಗಳಿಗೆ ಪರಿಹಾರ ಸಾಮಾಗ್ರಿಗಳ ಪೂರೈಸಲು ಟ್ರಕ್‌ಗಳ ವ್ಯವಸ್ಥೆ ಮತ್ತು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬೇರೆ ದೇಶಗಳಿಗೆ ಕಳುಹಿಸುವ ಒಪ್ಪಂದವನ್ನು ಒಳಗೊಂಡಿರುತ್ತದೆ. ಎರಡೂ ದೇಶಗಳ ನಡುವೆ ವಾರಗಳಿಂದ ಮಾತುಕತೆ ನಡೆಯುತ್ತಿದೆ, ಇಸ್ರೇಲ್‌ ಕಡೆಯವರು ಒಪ್ಪಂದದ ಒಮ್ಮತಕ್ಕೆ ಬರುತ್ತಿಲ್ಲ ಎಂದು ಎಲ್-ರೆಶಿಕ್ ಹೇಳಿದ್ದಾರೆ.

ಇಸ್ರೇಲ್‌ನ ಸುದ್ದಿ ವೆಬ್‌ಸೈಟ್‌ವೊಂದು ವರದಿಯನ್ನು ಮಾಡಿದ್ದು, ಹಮಾಸ್‌ನ ಹಿರಿಯ ಅಧಿಕಾರಿ ಯಾಹ್ಯಾ ಸಿನ್ವಾರ್ ಒಪ್ಪಂದದ ಸಮಯದಲ್ಲಿ ಗಾಝಾದಲ್ಲಿ ಇಸ್ರೇಲ್‌ ವಿಮಾನಗಳ ಚಟುವಟಿಕೆಯನ್ನು ನಿಷೇಧಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಈವರೆಗೆ ಪ್ಯಾಲೆಸ್ತೀನ್‌ನಲ್ಲಿ ಮೃತರ ಸಂಖ್ಯೆ 15,000ಕ್ಕೂ ಅಧಿಕ ಇದೆ ಎಂದು ಯುರೋ-ಮೆಡ್ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಮೃತರಲ್ಲಿ 6,403 ಮಕ್ಕಳು ಮೃತಪಟ್ಟಿದ್ದಾರೆ. ಮೃತರಲ್ಲಿ 3,561 ಮಂದಿ ಮಹಿಳೆಯರು ಸೇರಿದ್ದಾರೆ. ಯುದ್ಧದಲ್ಲಿ 30,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹಮಾಸ್‌ನೊಂದಿಗಿನ ಒತ್ತೆಯಾಳುಗಳ ಒಪ್ಪಂದದ ಕುರಿತು ಕತಾರ್ ಇಸ್ರೇಲ್‌ಗೆ ಎರಡು ಸಲಹೆಗಳನ್ನು ಕೂಡ ನಿನ್ನೆ ನೀಡಿತ್ತು. ಮೊದಲನೆಯದಾಗಿ 3 ದಿನಗಳ ಕದನ ವಿರಾಮ ಮತ್ತು ಗಾಝಾ ಪಟ್ಟಿಗೆ ನಿರ್ದಿಷ್ಟ ಪ್ರಮಾಣದ ಇಂಧನದ ಪೂರೈಕೆಗೆ ಬದಲಾಗಿ 53 ಮಕ್ಕಳು ಮತ್ತು ಮಹಿಳೆಯರನ್ನು ಹಮಾಸ್‌ನಿಂದ ಬಿಡುಗಡೆ ಮಾಡುವುದಾಗಿದೆ.

ಪ್ಯಾಲೆಸ್ತೀನ್ ಮಹಿಳೆಯರು ಮತ್ತು ಮಕ್ಕಳು ಮತ್ತು ಕೆಲವು ಭದ್ರತಾ ಖೈದಿಗಳ ಬಿಡುಗಡೆ, 5 ದಿನಗಳ ಕದನ ವಿರಾಮ ಮತ್ತು ಹೆಚ್ಚಿನ ಪ್ರಮಾಣದ ಇಂಧನದ ಪೂರೈಕೆಗೆ ಬದಲಾಗಿ ಹಮಾಸ್ 87 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬಗ್ಗೆ ಎರಡನೆಯ ಸಲಹೆಯನ್ನು ನೀಡಲಾಗಿದೆ ಎಂದು ಪ್ಯಾಲೆಸ್ತೀನ್‌ ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಾಝಾ ಪಟ್ಟಿಯಲ್ಲಿ ಇಟ್ಟುಕೊಂಡಿರುವ ಇಸ್ರೇಲ್‌ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬಗ್ಗೆ ಇನ್ನೂ ಯಾವುದೇ ಒಪ್ಪಂದಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!