Friday, November 20, 2026

ಪ್ರಾಯೋಗಿಕ ಆವೃತ್ತಿ

ದೈಹಿಕ – ಮಾನಸಿಕ ಸ್ವಾಸ್ಥ್ಯ ಕಾಯ್ದುಕ್ಕೊಳ್ಳಲು ಸೈಕಲ್ ಬಳಕೆ ಪೂರಕ ; ಟಕ್ಕನ್ನವರ್

ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಯ್ದುಕ್ಕೊಳ್ಳುವಲ್ಲಿ ಸೈಕಲ್ ಬಳಕೆ ಪೂರಕವಾದದ್ದು ಎಂದು ಸರ್ಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಸಮಾಜಶಾಸ್ತ್ರ ಉಪನ್ಯಾಸಕ ಹನುಮಂತ ಟಕ್ಕನ್ನವರ್ ಅಭಿಪ್ರಾಯಪಟ್ಟರು.

ಸೈಕಲ್ ಬಳಕೆ ಆರೋಗ್ಯಕ್ಕೆ ಪೂರಕವಾದದ್ದು ಸರಳ ಜೀವನ ಸಧೃಡ ದೇಹ ಉತ್ತಮ ಅಲೊಚನೆಯ ಸಾಧನ
ಈ ಹಿನ್ನಲೆಯಲ್ಲಿ ಈ ಕುರಿತು ಜನರಿಗೆ ಪ್ರೇರಣೆ ಮೂಡಿಸುವ ಉದ್ದೇಶದಿಂದ ಈ ಸೈಕಲ್ ಜಾಥ ಹಮ್ಮಿಕ್ಕೊಂಡಿರುವುದಾಗಿ ಮದ್ದೂರಿನಲ್ಲಿ ತಿಳಿಸಿದರು.

ಕರ್ನಾಟಕ ಲಿಂಗಾಯುತ ಮಠಾಧೀಪತಿಗಳ ಒಕ್ಕೂಟವು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯು ಬಸವ ಸಂಸ್ಕೃತಿ ಅಭಿಯಾನದ ಭಾಗವಾಗಿ ಹುಬ್ಬಳ್ಳಿಯಿಂದ ಸೈಕಲ್ ಮೂಲಕ ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿರುವ ಕುರಿತು ಅವರು ವಿವರಿಸಿದರು.

ಸಮ ಸಮಾಜದ ನಿರ್ಮಾಣ ಮಾನವೀಯಾ ಮೌಲ್ಯ ಹಾಗು ಪ್ರಜಾಸತ್ತಾತ್ಮಕ ಮೌಲ್ಯಗಳ ವೃದ್ದಿ ಪ್ರಜಾಸತ್ತಾತ್ಮಕತೆ ಮೌಲ್ಯಗಳ ಸಂರಕ್ಷಣೆ ವ್ಯಕ್ತಿತ್ವ ವಿಕಸನ ಮಹಿಳಾ ಸಬಲಿಕರಣದಂತಹ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಸೈಕಲ್ ಜಾಗೃತಿ ಅಭಿಯಾನ ಉದ್ದೇಶ ಎಂದು ವಿವರಿಸಿದರು.

ಕಾಯಕವೇ ಕೈಲಾಸ ತತ್ವದ ಜೊತೆಗೆ ಕಾಯವೇ (ದೇಹವೇ) ಕೈಲಾಸ ಎನ್ನುವ ಶರಣ ತತ್ವದ ಘೋಷವಾಕ್ಯದಡಿ
ದೇಹದ ದೃಢತೆ ಮನಸ್ಸಿನ ಸ್ವಾಸ್ಥ್ಯ ದೊಂದಿಗೆ ಸಮಾಜದ ಸುಧಾರಣೆಗೆ ಪ್ರತಿಯೊಬ್ಬರು ತನ್ನಿಂದಲೆ ಬದಲಾವಣೆ ಆರಂಭಿಸಬೇಕು, ಆಗಷ್ಠೇ ಸಮಾಜದ ಬದಲಾವಣೆ ನೀರಿಕ್ಷಿಸಲು ಸಾಧ್ಯ ಅ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಆಶಯ ನಮ್ಮದು ಎಂದರು.

ಸೈಕಲ್ ಪ್ರವಾಸದಲ್ಲಿ ಶಂಕರ್ ಕೊಡತೆ, ಲಿಂಗಸಗೂರು ವೀರಭದ್ರಪ್ಪ, ಅಂಭಿ ಶಿವಯೋಗಿ ಅವರು
ನ.ಲಿ.ಕೃಷ್ಣ, ಮ.ನ.ಪ್ರಸನ್ನ, .ಶ್ರೀಕಾ ಶ್ರೀನಿವಾಸ್, ಬ್ಯಾಡರಹಳ್ಳಿ ಶಿವಕುಮಾರ್, ಗೊರವನಹಳ್ಳಿ ಪ್ರಸನ್ನ
.ಎಸ್ ಪಿ ಕಂಪ್ಯೂಟರ್ಸ್ ಲಿಂಗೇಗೌಡ. ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ವಾಮಿ ಮಾದನಾಯಕನಹಳ್ಳಿ, ಗ್ರಾ ಪಂ ಸದಸ್ಯ ನಟರಾಜ್, ಮುತ್ತಲಿಂಗು, ಬೂದುಗುಪ್ಪೆ ಸಿದ್ದರಾಮು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ