Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಹರಳಹಳ್ಳಿ ಡೇರಿಗೆ 12 ಜನ ಸದಸ್ಯರ ಅವಿರೋಧ ಆಯ್ಕೆ

ಕೆ.ಆರ್.ಪೇಟೆ ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶಾಸಕರಾದ ಹೆಚ್.ಟಿ.ಮಂಜು ನೇತೃತ್ವದಲ್ಲಿ 12ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಹೆಚ್.ಟಿ.ಮಂಜು, ಬಿ.ಸಾಗರ್, ಮಹೇಶ್, ದಿಲೀಪ್.ಎಚ್.ಎಂ, ಲೋಕೇಶ್, ಲಿಂಗರಾಜು. ಮಹಿಳಾ ಮೀಸಲು ಕ್ಷೇತ್ರದಿಂದ ಎಚ್.ಎಸ್.ನೀಲಮ್ಮ ಎಚ್.ಎಸ್., ಸುಬ್ಬಮ್ಮ, ಪರಿಶಿಷ್ಟ ಜಾತಿ‌ ಮೀಸಲು ಕ್ಷೇತ್ರದಿಂದ ಲಲಿತಾಬಾಯಿ ರಾಥೋಡ್, ಬಿಸಿಎಂ (ಎ) ಮೀಸಲು ಕ್ಷೇತ್ರದಿಂದ ಅಹಮದ್ ಪಾಷಾ, ಬಿಸಿಎಂ (ಬಿ‌)ಮೀಸಲು ಕ್ಷೇತ್ರದಿಂದ ಹೆಚ್.ಕೆ.ರಮೇಶ್ ಅವಿರೋಧವಾಗಿ ಆಯ್ಕೆಯಾದರು.

ನೂತನ ಸದಸ್ಯರನ್ನು ಶಾಸಕರಾದ ಹೆಚ್.ಟಿ.ಮಂಜು ಅಭಿನಂದಿಸಿ ಮಾತನಾಡಿ, ನನ್ನ ಹುಟ್ಟೂರು ಹರಳಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಆಡಳಿತ ಮಂಡಳಿ‌ಗೆ ಎಲ್ಲಾ 12ಮಂದಿ ಸದಸ್ಯರನ್ನು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದೇ ರೀತಿ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೂ ಸದಸ್ಯರನ್ನು  ಅವಿರೋಧವಾಗಿ ಆಯ್ಕೆ ಮಾಡಿದರೆ ಗ್ರಾಮಗಳಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್ ಟಿ ಲೋಕೇಶ್, ಶಿವಲಿಂಗೇಗೌಡ ,ಕೃಷ್ಣೇಗೌಡ, ಸೋಮಶೇಖರ್, ಮಂಜೇಗೌಡ ,ವಿಜಯೇಂದ್ರ ಸೇರಿದಂತೆ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ