Tuesday, November 24, 2026

ಪ್ರಾಯೋಗಿಕ ಆವೃತ್ತಿ

ಆರೋಗ್ಯ ಚೆನ್ನಾಗಿದ್ದರೆ ಯಶಸ್ಸು ಸಾಧ್ಯ

ಮನುಷ್ಯನಿಗೆ ಆರೋಗ್ಯ ತುಂಬ ಅವಶ್ಯಕ, ಆರೋಗ್ಯವೊಂದು ಚೆನ್ನಾಗಿದಲ್ಲಿ ಮನುಷ್ಯನು ಎಲ್ಲಾ ರೀತಿಯ ಕಾರ್ಯಗಳಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಭಾತರ ಸೇವಾದಳ ಸಮಿತಿಯ ಕಾರ್ಯದರ್ಶಿ
ಜಿ.ವಿ.ನಾಗರಾಜು ತಿಳಿಸಿದರು.

ಮಂಡ್ಯ ನಗರದ ಸೇವಾಕಿರಣ ಸಭಾಂಗಣದಲ್ಲಿ ಭಾತರ ಸೇವಾದಳ ಸಮಿತಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕ್ಯಾತುಂಗೆರೆ ಇವರ ವತಿಯಿಂದ ಗುರುವಾರ ಆಯೋಜಿಸಿದ್ದ ವೃದ್ಧರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಖಾಸಗೀ ತಪಾಸಣಾ ಕೇಂದ್ರಗಳಲ್ಲಿ ಕೇವಲ ರಕ್ತದ ಪರೀಕ್ಷೆ ಮಾಡಿಸಲು ಅಂದಾಜು 200 ರೂ.ನಿಂದ 300 ರೂ ವರೆಗೆ ವೆಚ್ಚವಾಗಲಿದೆ. ಒಂದು ಕಣ್ಣಿನ ಶಸ್ತ್ರ ಚಿಕಿತ್ಸೆಗೆ 30 ಸಾವಿರ ದಿಂದ 50 ಸಾವಿರ ರೂ.ವರೆಗೆ ವೆಚ್ಚವಾಗಲಿದೆ. ಆದರೆ, ಈ ದುಬಾರಿ ಆಸ್ಪತ್ರೆಯ ವೆಚ್ಚಗಳನ್ನು ಬಡವರಿಗೆ ಭರಿಸಲು ಸಾಧ್ಯವಿಲ್ಲ. ಆದರಿಂದಲೇ ಸರಕಾರಗಳು ಸರಕಾರಿ ಆಸ್ಪತ್ರೆಗಳ ಮುಖಾಂತರ ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.

ಈ ವೇಳೆ ವೃದ್ದರಿಗೆ ವೈದ್ಯರು ಆರೋಗ್ಯತಪಾಸಣೆ ಮಾಡಿದರು. ಕಾರ್ಯಕ್ರಮದಲ್ಲಿ ಎಂ.ಎಲ್.ಪ್ರಕಾಶ್, ಡಾ.ಶರಣ್, ಡಾ.ಸಾತ್ವಿಕ್, ಡಾ.ವಸುಮತಿ, ಸೇವಾದಳದ ಜಿಲ್ಲಾ ಸಂಘಟಕ ಸಿ.ಎಸ್.ಗಣೇಶ್, ಸೋನು, ಶಶಾಂಕ್, ಮಧುಸೂದನ್ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ