Saturday, November 21, 2026

ಪ್ರಾಯೋಗಿಕ ಆವೃತ್ತಿ

ಪೊಲೀಸರ ಭದ್ರತೆಯಲ್ಲಿ ನಡೆದ ಸಂಕೀರ್ತನಾ ಯಾತ್ರೆ

ಶ್ರೀರಂಗಪಟ್ಟಣದಲ್ಲಿಂದು ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಪಕ್ಷದ ವತಿಯಿಂದ ನಡೆದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಪೋಲಿಸರ ಬಿಗಿ ಭದ್ರತೆಯಲ್ಲಿ ನಡೆಯಿತು.

ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಭ ದೇವಾಲಯದಿಂದ ಸಾಗಿದ ಹನುಮ ಮಾಲಾಧಾರಿಗಳು ದಾರಿಯುದ್ದಕ್ಕೂ ಜೈ ಶ್ರೀರಾಮ್, ಜೈ ಹನುಮಾನ್ ಎಂದು ಘೋಷಣೆ ಕೂಗುತ್ತಾ ಸಾಗಿದರು. ನಿಮಿಷಾಂಭ ದೇವಾಲಯದಿಂದ ಮೂಡಲಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದವರೆಗೂ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಸುಮಾರು 8 ರಿಂದ 10 ಸಾವಿರದಷ್ಟು ಜನರು ಪಾಲ್ಗೊಂಡಿದ್ದರು.

ಕೇಸರಿಮಯ

ಇಂದು ಶ್ರೀರಂಗಪಟ್ಟಣ ಅಕ್ಷರಶಃ ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಕೇಸರಿ ಬಾವುಟ ಗಳು, ಫ್ಲೆಕ್ಸ್ ಗಳು ಎದ್ದು ಕಾಣುತ್ತಿತ್ತು. ಯುವಕರು, ಚಿಕ್ಕ ಮಕ್ಕಳು ಹನುಮ ಮಾಲಾಧಾರಿಗಳಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಸರ್ಪಗಾವಲು

ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಜಾಮೀಯಾ ಮಸೀದಿ ಬಳಿ ಬರುತ್ತಿದ್ದಂತೆ ಜೈ ಶ್ರೀರಾಮ್ ಘೋಷ ವಾಕ್ಯ ತಾರಕಕ್ಕೇರಿತು. ಹನುಮ ಮಾಲಾಧಾರಿಗಳು ಕೇಸರಿ ಬಾವುಟ, ಶಾಲು ತಿರುಗಿಸುತ್ತಾ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ, ಹನುಮನ ಪಾದದ ಮೇಲಾಣೆ ಮಂದಿರವಲ್ಲೇ ಕಟ್ಟುವೆವು ಎಂದು ಜಾಮೀಯ ಮಸೀದಿಯ ಸುತ್ತ ಅಳವಡಿಸಲಾಗಿದ್ದ ಬ್ಯಾರಿಕೇಡ್ ಮುರಿದು ನುಗ್ಗಲು ಪ್ರಯತ್ನಿಸಿದರು. ಮಸೀದಿಗೆ ನುಗ್ಗಲು ಹನುಮ ಮಾಲಾಧಾರಿಗಳು ತಳ್ಳಾಳ ನೂಕಾಟ ನಡೆಸಿದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಿಲಿಲ್ಲ, ಮಂಡ್ಯ ಎಸ್ಪಿ ಎನ್.ಯತೀಶ್ ತಾವೇ ಸ್ವತಃ ಖುದ್ದಾಗಿ ಹೋಗಿ ಹನುಮ ಮಾಲಾಧಾರಿಗಳನ್ನು ಅಲ್ಲಿಂದ ತೆರವು ಗೊಳಿಸಿದರು.

ಬಿಗಿ ಬಂದೋಬಸ್ತ್

ಸಂಕೀರ್ತನಾ ಯಾತ್ರೆಯ ಭದ್ರತೆಗಾಗಿ ಒಂದು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಹನುಮ ಮಾಲಾಧಾರಿಗಳು, ಸಂಘ ಪರಿವಾರದ ನಾಯಕರು, ಬಿಜೆಪಿ ಮುಖಂಡರು ಮಸೀದಿಗೆ ನುಗ್ಗಲು ಯತ್ನಿಸಿದ ಹಿನ್ನಲೆಯಲ್ಲಿ ಪೋಲಿಸರೊಂದಿಗೆ ಮಾತಿನ ಚಕಮಕಿ ಕೂಡ ನಡೆಯಿತು.

ಹನುಮ ಮಾಲಾಧಾರಿಗಳನ್ನು ಪೋಲಿಸರು ದಬ್ಬಿದರು. ಜಾಮಿಯಾ ಮಸೀದಿ ಸುತ್ತಲೂ ಬ್ಯಾರಿಕೇಡ್ ಹಾಕಿದ ಹಿನ್ನಲೆಯಲ್ಲಿ ಹನುಮ ಮಾಲಾಧಾರಿಗಳು ಅದನ್ನು ಮುರಿಯಲು ಯತ್ನ ನಡೆಸಿದರು. ಮರದ ಬ್ಯಾರಿಕೇಡ್ ಅಲುಗಾಡಿಸಿ ಮುರಿಯಲು ಯತ್ನ ನಡೆಸಿದರೂ, ಸಾಕಷ್ಟು ಸಂಖ್ಯೆಯಲ್ಲಿದ್ದ ಪೋಲಿಸರು ಮಾಲಾಧಾರಿಗಳ ಪ್ರಯತ್ನವನ್ನು ವಿಫಲಗೊಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ