Wednesday, November 18, 2026

ಪ್ರಾಯೋಗಿಕ ಆವೃತ್ತಿ

ಹಿಜಾಬ್ | ವಿಭಿನ್ನ ತೀರ್ಪು ನೀಡಿದ ಸುಪ್ರಿಂಕೋರ್ಟ್‌ ದ್ವಿಸದಸ್ಯ ಪೀಠ

ರಾಜ್ಯ ಸರ್ಕಾರ ಹೊರಡಿಸಿದ್ದ ಹಿಜಾಬ್‌ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್‌‌ ದ್ವಿಸದಸ್ಯ ಪೀಠವೂ ವಿಭಿನ್ನವಾಗಿ ತೀರ್ಪು ನೀಡಿದೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಹಿಜಾಬ್ ನಿಷೇಧದ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವುಗಳನ್ನು ಅನುಮತಿಸಿದರು.

“ಇದು ಅಂತಿಮವಾಗಿ ಆಯ್ಕೆಯ ವಿಷಯವೇ ಹೊರತು ಬೇರೇನೂ ಇಲ್ಲ. ನನ್ನ ಮನಸ್ಸಿನಲ್ಲಿ ಮುಖ್ಯವಾಗಿ ಹೆಣ್ಣು ಮಗುವಿನ ಶಿಕ್ಷಣ ಮಾತ್ರವಾಗಿತ್ತು. ನನ್ನ ಸಹೋದರ ನ್ಯಾಯಾಧೀಶರ ತೀರ್ಪನ್ನು ನಾನು ಗೌರವಯುತಗಿಯೆ ಒಪ್ಪುವುದಿಲ್ಲ” ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ. ಇದು ಧಾರ್ಮಿಕ ಹಕ್ಕಿಗಿಂತ ಶಿಕ್ಷಣದ ಹಕ್ಕಿನ ವಿಚಾರ ಮತ್ತು ವಿದ್ಯಾರ್ಥಿನಿಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಅವರು ಕರ್ನಾಟಕ ಸರ್ಕಾರದ ಆದೇಶವನ್ನು ರದ್ದು ಮಾಡಿದರು.

ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯವಿದೆ” ಎಂದು ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ಅವರು ಹೇಳಿದ್ದಾರೆ. ಅರ್ಜಿದಾರರಿಗೆ 11 ಪ್ರಶ್ನೆಗಳನ್ನು ಕೇಳಿದ ನ್ಯಾಯಮೂರ್ತಿ ವಿದ್ಯಾರ್ಥಿನಿಯರ ಮನವಿಯನ್ನು ವಜಾಗೊಳಿಸಿ, ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಒಪ್ಪುತ್ತೇನೆ ಎಂದು ಹೇಳಿದ್ದಾರೆ.

ತೀರ್ಪಿನಲ್ಲಿ ಒಮ್ಮತವಿಲ್ಲದಿರುವುದರಿಂದ ಪ್ರಕರಣವು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಅವರಿಗೆ ಉಲ್ಲೇಖಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ ಉದ್ಭವಿಸಿದ ಕೆಲವು ಸಮಸ್ಯೆಗಳು:

ಶಬರಿಮಲೆ ಉಲ್ಲೇಖದ ಬಾಕಿ ಇರುವ ಹಿನ್ನೆಲೆಯಲ್ಲಿ ವಿಷಯವನ್ನು ದೊಡ್ಡ ಪೀಠಕ್ಕೆ ಉಲ್ಲೇಖಿಸಬೇಕೇ?

ಇಸ್ಲಾಂನಲ್ಲಿ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆಯೇ?

ಆರ್ಟಿಕಲ್ 25 ರ ರಕ್ಷಣೆಯನ್ನು ಪಡೆಯಲು ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ಸ್ಥಾಪಿಸುವ ಅಗತ್ಯವಿದೆಯೇ?

ಹಿಜಾಬ್ ಧರಿಸುವ ಹಕ್ಕನ್ನು ಆರ್ಟಿಕಲ್ 19(1)(ಎ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಮತ್ತು ಆರ್ಟಿಕಲ್ 21 ರ ಅಡಿಯಲ್ಲಿ ಗೌಪ್ಯತೆ ಮತ್ತು ಘನತೆಯ ಹಕ್ಕಿನ ಭಾಗವಾಗಿ ಕ್ಲೈಮ್ ಮಾಡಬಹುದೇ?

ಫೆಬ್ರವರಿ 5 ರ ಸರ್ಕಾರಿ ಆದೇಶವನ್ನು ಆರ್ಟಿಕಲ್ 19(2) ಅಡಿಯಲ್ಲಿ ಸಮಂಜಸವಾದ ನಿರ್ಬಂಧಗಳ ಆಧಾರದ ಮೇಲೆ ಸಮರ್ಥಿಸಬಹುದೇ?

ಇತರ ಕೆಲವು ಗುಂಪುಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ಆರಂಭಿಸಿದ ಕಾರಣ ಹಿಜಾಬ್ ಧರಿಸುವುದನ್ನು ನಿಷೇಧಿಸಬಹುದೇ? ಅಂತಹ ನಿರ್ಬಂಧವು ಹೆಕ್ಲರ್ಸ್ ವೀಟೋಗೆ ಬಲಿಯಾಗುವುದೇ?

ಈಗಾಗಲೇ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಎದುರಿಸುತ್ತಿರುವ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಲು ಕಾರಣವಾಗುವ ನಿರ್ಬಂಧವನ್ನು ಹೇರಲು ಯಾವುದೇ ಕಾನೂನುಬದ್ಧ ರಾಜ್ಯ ಹಿತಾಸಕ್ತಿ ಇದೆಯೇ?

ಪರಸ್ಪರ ಭಿನ್ನಮತದ ತೀರ್ಪು – ಒಮ್ಮತವಿಲ್ಲದಿರುವುದರಿಂದ ಮುಖ್ಯ ನ್ಯಾಯಮುರ್ತಿಯವಾರ ಸಮಕ್ಷಮಕ್ಕೆ .. ಅಂತಿಮ ತೀರ್ಮಾನವಿಲ್ಲ

ಜಸ್ಟಿಸ್ ಹೇಮಂತ್ ಗುಪ್ತಾ – ಹಿಜಾಬ್ ಕೋರಿಕೆಯನ್ನು ನಿರಾಕರಿಸಿ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದರು .

ಜಸ್ಟಿಸ್ ಧುಲಿಯಾ- ಇದು ಧಾರ್ಮಿಕ ಹಕ್ಕಿಗಿಂತ ಶಿಕ್ಷಣದ ಹಕ್ಕಿನ ವಿಚಾರ ಎಂಬ ವಾದವನ್ನು ಹಾಗೂ ವಿದ್ಯಾರ್ಥಿನಿಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ಕರ್ನಾಟಕ ಸರ್ಕಾರದ ಆದೇಶವನ್ನು ರದ್ದು ಮಾಡಿದರು.

ಹೀಗಾಗಿ ಈ ಪ್ರಕರಣವನ್ನು ಮುಖ್ಯ ನ್ಯಾಯಾಧೀಶರು ಮೂವರು ನ್ಯಾಯಾಧೀಶರ  ಪೀಠಕ್ಕೆ ವರ್ಗಾಯಿಸಬಹುದು. (http://Livelaw.com ನಲ್ಲಿ ವರದಿಯಾದಂತೆ)

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ