ಕಥೆ, ಚಿತ್ರಕಥೆ, ನಟನಾಗಿ ನಿರ್ದೇಶಕನಾಗಿ ಕೆಲಸ ಮಾಡಿರುವ ಚಲನಚಿತ್ರ `ಹಿಕೋರ’ ನ.೧೪ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮಂಡ್ಯದಲ್ಲಿ ಇಂದು (ನ.೨೧)ರಿಂದ ಪ್ರದರ್ಶನಗೊಳ್ಳುತ್ತಿದ್ದು, ಚಲನಚಿತ್ರ ಪ್ರಿಯರು ಚಿತ್ರ ಮಂದಿರಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸುವಂತೆ ನೀನಾಸಂ ಕಿಟ್ಟಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರವನ್ನು ನೀಲಕಂಠೇಶ್ವರ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ರತ್ನ ಶ್ರೀಧರ್ ಅವರು ನಿರ್ಮಿಸಿದ್ದು, ಭಾವನಾತ್ಮಕ ಸಸ್ಪೆನ್ಸ್ ಹೊಂದಿರುವ ಚಿತ್ರವಾಗಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಚಿತ್ರಮಂದಿರಗಳು ಸಿಗದ ಕಾರಣ ನ.೧೪ರಂದು ಬಿಡುಗಡೆ ಮಾಡಲಾಗಿಲ್ಲ. ಕರ್ನಾಟಕ ರಕ್ಷಣಾ ವೇದಿಕೆಯ ಸಹಕಾರದಿಂದ ಕೆಲವು ಹೋರಾಟಗಳ ನಂತರ ಚಿತ್ರ ಬಿಡುಗಡೆಗೆ ಅವಕಾಶ ದೊರೆತಿದೆ. ಮಂಡ್ಯದ ಮುದುಗೆರೆ ಗ್ರಾಮದ ಕಲಾವಿದನಾಗಿದ್ದು. ನನ್ನ ಸಿನಿಮಾವನ್ನು ಊರಿನ ಜನರಿಗೆ ಪರಿಚಯಿಸುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದರು.
ಚಿತ್ರದಲ್ಲಿ ನಾಯಕಿಯಾಗಿ ಸ್ಪಂದನಾ ಪ್ರಸಾದ್, ಪ್ರಕಾಶ್ ಬೆಳವಾಡಿ, ಯಶ್ ಶೆಟ್ಟಿ, ಮಠ ಗುರುಪ್ರಸಾದ್, ಸರ್ಧಾರ್ ಸತ್ಯ, ರಘು ಪಾಂಡೇಶ್ವರ್, ಲಾವಂತಿ ಸೇರಿದಂತೆ ನೀನಾಸಂ ರಂಗಭೂಮಿಯಿಂದ ಹೆಚ್ಚು ಕಲಾವಿದರು ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ, ಜೋಗ್ ಜಲಪಾತ, ಸಾಗರ, ಸೇರಿದಂತ ಹಲವೆಡೆ ಚಿತ್ರೀಕರಣ ಮಾಡಲಾಗಿದ್ದು, ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದಿಂದ ರಚಿತವಾಗ ೫ ಹಾಡುಗಳಿವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಗೋಷ್ಠಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಚಿದಂಬರ್, ಎಂ.ಪಿ.ಸ್ವಾಮಿ ಹಾಗೂ ಸುರೇಶ್ ಇದ್ದರು.




