ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯ ಎಚ್.ಕೆ. ಮರಿಯಪ್ಪ ಕಾರ್ಮೆಂಟ್ ಆವರಣದಲ್ಲಿ ಡಿ.30ರಂದು ಎಂ.ಎಚ್. ಚನ್ನೇಗೌಡ ವಿದ್ಯಾನಿಲಯದ ವತಿಯಿಂದ ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಎಚ್.ಕೆ.ವೀರಣ್ಣಗೌಡ ಅವರ ಹೆಸರಿನಲ್ಲಿ ‘ಎಚ್ಕೆವಿ ಹಬ್ಬ’ ಹಾಗೂ ಅವರ ಸಹೋದರ ಎಚ್.ಕೆ.ಮರಿಯಪ್ಪನ ನವರ ಪರಿಷ್ಕೃತ ಅಭಿನಂದನಾ ಗ್ರಂಥ ‘ಹೊನ್ನಕಳಸ’ ಬಿಡುಗಡೆ ಕಾಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ ಸ್ವರೂಪ್ ಚಂದ್ ತಿಳಿಸಿದರು.
ಮದ್ದೂರು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ. ಚಂದು ಅವರ ಮಾರ್ಗದರ್ಶನದಲ್ಲಿ ಅನಿವಾಸಿ ಭಾರತೀಯ ಡಾ.ಎಚ್ .ಕೆ.ಮರಿಯಪ್ಪ ಉದ್ಘಾಟಿಸಲಿದ್ದು, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಉಪ ಮುಖ್ಯ ಸಂಪಾದಕ ರಾಜು ಮಳವಳ್ಳಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಅತಿಥಿಗಳಾಗಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ.ಚಲುವಯ್ಯ, ಎಚ್. ಶಿವರಾಮೇಗೌಡ, ಬಿಇಒ ಸಿ.ಎಚ್. ಕಾಳಿರಯ್ಯ, ಪುರಸಭಾ ಸದಸ್ಯರಾದ ಎಂ.ಐ.ಪ್ರವೀಣ್, ಎಸ್.ಮಹೇಶ್ ಎಂ.ಬಿ. ಸಚಿನ್, ಪ್ರಮೀಳಾ, ಪ್ರಿಯಾಂಕ ಪಿ ಅಪ್ಪುಗೌಡ , ಕೋಕಿಲ ಅರುಣ್ ಹಾಗೂ ಅನಿವಾಸಿ ಭಾರತೀಯರಾ ಆದರ್ಶ್ ಮರಿಯಪ್ಪ, ಕ್ಯಾರೊಲಿನ್, ಕೋಲ್, ಏಡನ್, ಏವನ್ ಸೇರಿದಂತೆ ಇತರರು ಭಾಗವಹಿಸಲಿದ್ದು, ಸಂಸ್ಧೆಯ ಪೋಷಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಗೋಷ್ಠಿಯಲ್ಲಿ ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ, ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಆಡಳಿತಾಧಿಕಾರಿ ಯು.ಎಸ್.ರವಿ, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ಕೆ.ಎನ್.ವರದರಾಜು ಹಾಜರಿದ್ದರು.




