ರಂಗಭೂಮಿ ಮೂಲಕ ಸಿನಿಮಾರಂಗ ಪ್ರವೇಶ ಮಾಡಿದ ಲೀಲಾವತಿಯವರು ಚಿತ್ರರಂಗದಲ್ಲಿ ತಮ್ಮದೆ ಛಾಪು ಮೂಡಿಸಿ, ಕಲಾಸೇವೆಮಾಡಿದ್ದಲ್ಲದೆ ನಾಡು, ನುಡಿ, ನೆಲ, ಜಲದ ವಿಷಯದಲ್ಲಿಯು ಪಾಲ್ಗೊಂಡು ಸಾರ್ಥಕ ಜೀವನ ನಡೆಸಿ, ಜನಮಾನಸದಲ್ಲಿ ಹಸಿರಾಗಿ ತಮ್ಮ ನೆನಪು ಉಳಿಸಿ ಹೊಗಿದ್ದಾರೆ ಎಂದು ಕನ್ನಡಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ವಿ ಸಿ ಉಮಾಶಂಕರ್ ಗುಣಗಾನ ಮಾಡಿದರು.
ಮದ್ದೂರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮದ್ರಾಸ್ ನಲ್ಲಿ ಇದ್ದ ಆಸ್ತಿ ಮಾರಾಟ ಮಾಡಿ ಕನ್ನಡ ನೆಲದಲ್ಲಿ ನೆಲೆಸುವ ತಿರ್ಮಾನ ಅವರೊಳಗಿನ ಕನ್ನಡ ಪರತೆಗೆ ಸಾಕ್ಷಿ ಎಂದರು
ರೈತ ಮುಖಂಡ ಸೊ ಶಿ ಪ್ರಕಾಶ್ ಮಾತನಾಡಿ, ಲೀಲಾವತಿಯವರು ಕಲೆ ಸೇವೆ ಜೊತೆಗೆ ಕೃಷಿ ಹಾಗು ಪ್ರಾಣಿಗಳ ಮೇಲಿನ ಒಲವಿನಿಂದಾಗಿ ಖ್ಯಾತ ನಟಿಯಾಗಿ ಐಷಾರಾಮಿ ಜೀವನ ಸಾಗಿಸಬಹುದಾದ ಸಾಧ್ಯತೆ ನಿರಾಕರಿಸಿ ತೋಟದ ಮನೆಯ ಪರಿಸರದಲ್ಲಿ ತಮ್ಮ ಜೀವನದ ಕೊನೆಯ ದಿನಗಳನ್ನು ಮಾದರಿಯಾಗಿ ನಡೆಸಿ ಸರಳತೆಗೆ ಮಾದರಿಯಾದರು ಎಂದರು.
ರೈತಮುಖಂಡ ಸೀತಾರಾಮ ಮಾತನಾಡಿ, ತಮ್ಮ ಸಮಕಾಲೀನರಾದ ಲೀಲಾವತಿಯವರ ಆರಂಭದ ಚಿತ್ರದಿಂದ ಈವರೆಗಿನ ಎಲ್ಲಾ ಬೆಳವಣಿಗೆಗೆ ಸಾಕ್ಷಿಯಾಗಿದ್ದನ್ನ ಈ ವೇಳೆ ಸ್ಮರಿಸಿದರು
ರೈತ ಮುಖಂಡ ರಾಮಕೃಷ್ಣಯ್ಯ ಮಾತನಾಡಿ, ಲೀಲಾವತಿಯವರು ಪಶು ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳನ್ನು ತೆರೆದು ಜನರಿಗೆ ನೆರವಾದ ಕಾರ್ಯ ಶ್ಲಾಘನೀಯ, ಈ ಮೂಲಕ ಲೀಲಾವತಿಯವರು ಜನಮನ ಗೆದ್ದಿದ್ದಾರೆ ಎಂದರು
ಪ್ರಗತಿಪರ ಸಂಘಟನೆಯ ನ.ಲಿ.ಕೃಷ್ಣ ಮಾತನಾಡಿ, ಕಲಾಸೇವೆಯಲ್ಲಿ ತಮ್ಮದೆ ಛಾಪು ಮೂಡಿಸಿದ ಲೀಲಾವತಿಯವರು, ನಾಡು, ನುಡಿ, ನೆಲ, ಜಲದ ವಿಷಯದಲ್ಲಿಯು ಭಾಗಿಯಾಗುವ ಮೂಲಕ ಸಮಾಜ ತನಗೆ ಕೊಟ್ಟ ಸ್ಥಾನಮಾನಕ್ಕೆ ಪ್ರತಿಯಾಗಿ ಸಮಾಜದ ಸೇವೆ ಮಾಡಿ ಸಾರ್ಥಕ ಜೀವನ ನಡೆಸಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೀಳಘಟ್ಟ ನಂಜುಂಡಯ್ಯ, ಅಣ್ಣೂರು ಮಹೇಂದ್ರ, ಕೊತ್ತನಹಳ್ಳಿ ಉಮೇಶ್, ಸಕ್ಕರೆ ನಾಗರಾಜು, ಅಶೋಕ್, ಮಹಾಲಿಂಗಯ್ಯ, ತೂಬಿನಕೆರೆ ರಾಜೇಗೌಡ, ಸೋಂಪುರ ಉಮೇಶ್, ಪಟೇಲ್ ಹರೀಶ್, ಶೇಖರ್, ವಳಗೆರೆಹಳ್ಳಿ ಶಿವಲಿಂಗಯ್ಯ, ವಿ ಎಮ್ ರಮೇಶ್, ಮರಿದೇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




