Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೊನ್ನೇಗೌಡ ಅಯ್ಕೆ

ಮದ್ದೂರು ತಾಲ್ಲೂಕು ಸಬ್ಬನಹಳ್ಳಿ ವಿವಿದ್ದೋದ್ದೇಶ ಗ್ರಾಮೀಣ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಸಬ್ಬನಹಳ್ಳಿ ಹೊನ್ನೇಗೌಡ, ಉಪಾಧ್ಯಕ್ಷೆಯಾಗಿ ಕಾಂತಮ್ಮ ಅವರು ಅವಿರೋಧವಾಗಿ ಆಯ್ಕೆಗೊಂಡರು.

ಇದೇ ವೇಳೆ ನೂತನ ಅಧ್ಯಕ್ಷ ಸಬ್ಬನಹಳ್ಳಿ ಹೊನ್ನೇಗೌಡ ಮಾತನಾಡಿ, ಈ ಸಹಕಾರ ಸಂಘವನ್ನು ಅಭಿವೃದ್ದಿ ಪಡಿಸಲು ಕಡಿಲುವಾಗಿಲು, ಲಕ್ಷ್ಮೇಗೌಡನದೊಡ್ಡಿ, ಸಬ್ಬನಹಳ್ಳಿ ಈ ಮೂರು ಗ್ರಾಮದ ಮತದಾರರು  ಚುನಾವಣೆಯಲ್ಲಿ ಆಡಳಿತ ಮಂಡಳಿ ಜೆಡಿಎಸ್ ಬೆಂಬಲಿತ 12 ಸದಸ್ಯರನ್ನೂ  ಅಭ್ಯರ್ಥಿಯನ್ನು 5 ವರ್ಷದ ಚುನಾವಣೆಗೆ ಆಯ್ಕೆಗೊಳಿಸಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದರು.

ಜಾಹೀರಾತು

ಸಂಘಕ್ಕೆ ಯಾವುದೇ ಚ್ಯುತಿಬಾರದ ರೀತಿಯಲ್ಲಿ ಕೆಲಸ ನಿರ್ವಹಿಸಿ ತಾಲ್ಲೂಕಿನಲ್ಲಿ ಒಳ್ಳೆಯ ಹೆಸರನ್ನು ಗಳಿಸಲು ಮುಂದಾಗುತ್ತೇನೆ. ಈಗಾಗಲೇ ನಮ್ಮ ಸಹಕಾರ ಸಂಘಕ್ಕೆ ಉತ್ತಮ ಸಹಕಾರ ಸಂಘ ಎಂದು ಪ್ರಶಸ್ತಿ ಬಂದಿದೆ. ಇದಕ್ಕೆಲ್ಲಾ ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ. ಮುಂದೆಯೂ ಸಹ ಇದೇ ರೀತಿ ಬೆಂಬಲವನ್ನು ನೀಡಿದರೆ ಮತ್ತಷ್ಟು ಅಭಿವೃದ್ದಿ ಪಡಿಸಲು ಮುಂದಾಗುತ್ತೇವೆ ಎಂದರು.

ಇದೇ ವೇಳೆ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮತ್ತು ಸದಸ್ಯರನ್ನು ಗ್ರಾಮದ ಮುಖಂಡರು, ಯಜಮಾನರು, ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕಡಿಲುವಾಗಿಲು ಟಿ.ತಿಮ್ಮೇಗೌಡ, ಡಿ.ವೆಂಕಟೇಶ್, ಲಕ್ಷ್ಮೇಗೌಡನದೊಡ್ಡಿ ಎಲ್.ಕೆ.ಚಿಕ್ಕಣ್ಣ, ಸಬ್ಬನಹಳ್ಳಿ ಮಂಚಲಿಂಗೇಗೌಡ, ಗೌರಮ್ಮ, ಎಸ್.ಎಂ.ಸಿದ್ದರಾಜು, ನಂದನ್ಕುಮಾರ್, ಎಸ್.ಎಂ.ಶಿವಲಿಂಗೇಗೌಡ, ಎಸ್.ಪಿ.ಸೋಮಶೇಖರ್, ಗೋವಿಂದಯ್ಯ, ಸಿಇಓ ಎಸ್.ಕೆ.ಪುಟ್ಟರಾಜು, ಚುನಾವಣಾಧಿಕಾರಿ ಮುತ್ತುರಾಜು, ಮುಖಂಡರಾದ ಸಬ್ಬನಹಳ್ಳಿ ಕುಮಾರ್, ಯಜಮಾನ್ ಹೊನ್ನೇಗೌಡ, ಕುಳ್ಳೇಗೌಡ, ಶಿವಲಿಂಗೇಗೌಡ, ದೇವೇಗೌಡ, ದೀಪು,ಕಡಿಲುವಾಗಿಲು ನಾಗರಾಜು, ಚಿಕ್ಕಹೈದಶೆಟ್ಟಿ, ಚಿಕ್ಕಣ್ಣ, ಪಟೇಲ್ ಲಕ್ಷ್ಮೇಗೌಡ, ಜಯರಾಮು, ಎಲ್.ಎನ್.ಕೃಷ್ಣೇಗೌಡ, ಎಸ್.ಡಿ.ಮಂಚಲಿಂಗೇಗೌಡ, ಜಗದೀಶ್ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ