Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮನೆ ಮನೆಗೆ ಬಸವ ಜ್ಯೋತಿ : ಆಧ್ಯಾತ್ಮಿಕ ಕಾರ್ಯಕ್ರಮ

ಮಂಡ್ಯ ನಗರದ ಗಾಂಧಿಭವನದಲ್ಲಿ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ವತಿಯಿಂದ ನಡೆದ ಮನೆ ಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮದ 129 ನೇ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ವೈದ್ಯನಾಥಪುರ ಗ್ರಾಮದ ಶ್ರೀ ಕದಂಬ ಜಂಗಮ ಮಠದ ಪರಮಪೂಜ್ಯ ಶ್ರೀರೇಣುಕಾಚಾರ್ಯ ಸ್ವಾಮೀಜಿಗಳು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನಿಗೆ ಮೊದಲು ನಡೆ ನುಡಿಯಲ್ಲಿ ಎಚ್ಚರವಿರಬೇಕು.‌ ನಂತರ ಧರ್ಮದ ಬಗ್ಗೆ ಅರಿವಿರಬೇಕು. ಗುರುವಿನಿಂದ ಇಷ್ಟಲಿಂಗ ಬರುವಂತದ್ದು, ಆದ್ದರಿಂದ ಗುರುವಿನ ಮೇಲೆ, ವಿಶ್ವಾಸ, ನಂಬಿಕೆ, ಪ್ರೀತಿ ಇರಬೇಕು ಎಂದರು.

ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಮಾತನಾಡಿ, ಶರಣರು ಎಂದಿಗೂ ತಮ್ಮನ್ನು ತಾವೂ ಪರಿಪೂರ್ಣರು ಎಂದು ಕರೆದಯಕೊಂಡಿಲ್ಲ. ಅವರು ಯಾವಾಗಲೂ ಪರಿಪೂರ್ಣವಾದ ಶೂನ್ಯ ಚಿಂತನೆ ಎಡೆಗೆ ಸಾಗುವ ಮನಸ್ಥಿತಿಯನ್ನ ಇಟ್ಟುಕೊಂಡವರು ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಸ್ ನಾಗರಾಜು, ಉಪಾಧ್ಯಕ್ಷ ದ್ಯಾವಣ್ಣ, ಪುರ ಗ್ರಾಮದ ಮಾಜಿ ಉಪಾಧ್ಯಕ್ಷ ದೇವರಾಜಪ್ಪ, ನಿರ್ದೇಶಕರಾದ ಶಿವಕುಮಾರ್, ಉಮೇಶ್, ಪುಟ್ಟಬುದ್ಧಿ, ಹೇಮಾವತಿ ಇನ್ನಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ