Wednesday, September 11, 2024

ಪ್ರಾಯೋಗಿಕ ಆವೃತ್ತಿ

ಪತಿ ಹತ್ಯೆ: ಪತ್ನಿ-ಪ್ರಿಯಕರ ಬಂಧನ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಉಸಿರುಗಟ್ಟಿಸಿ ಹತ್ಯೆ ಮಾಡಿ ಮಳವಳ್ಳಿ ಪೋಲಿಸರ ಬಲೆಗೆ ಬಿದ್ದಿದ್ದಾರೆ.

ತಮ್ಮ ಅಕ್ರಮ ಸಂಬಂಧಕ್ಕೆ ತಡೆಯಾಗಿದ್ದ ಪತಿ ಶಶಿಕುಮಾರ್ (35) ಕೊಲೆ ಮಾಡಿದ ಆರೋಪದ ಮೇರೆಗೆ ಆತನ ಪತ್ನಿ ನಾಗಮಣಿ(28) ಹಾಗೂ ಆಕೆಯ ಪ್ರಿಯಕರ ಕನಕಪುರದ ಹೇಮಂತ್ (25)ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.

ಮಳವಳ್ಳಿ ಪಟ್ಟಣದ ಎನ್ಇಎಸ್ ಬಡಾವಣೆಯಲ್ಲಿ ಕಳೆದ ಸೆ.18 ರಂದು ಶಶಿಕುಮಾರ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.ಈ ಬಗ್ಗೆ ಶಶಿಕುಮಾರ್ ತಾಯಿಗೆ ಸೊಸೆ ನಾಗಮಣಿ ಕೆಲವು ದುಷ್ಕರ್ಮಿಗಳು ಬಂದು ನನ್ನ ಹಾಗೂ ಮಗನ ಕೈಕಾಲು ಕಟ್ಟಿ ರೂಮಿನಲ್ಲಿ ಕಟ್ಟಿ ಹಾಕಿ ಶಶಿಕುಮಾರ್ ಅನ್ನು ಕೊಲೆ ಮಾಡಿ ಪರಾರಿಯಾದರು ಎಂದು ಸುಳ್ಳು ಹೇಳಿದ್ದಳು. ಇದನ್ನು ನಂಬದ ಶಶಿಕುಮಾರ್ ತಾಯಿ ಸೊಸೆಯ ಮೇಲೆ ಅನುಮಾನಗೊಂಡು ಪಟ್ಟಣದ ಪೋಲಿಸರಿಗೆ ದೂರು ನೀಡಿದ್ದರು‌.

ಈ ಹಿನ್ನೆಲೆಯಲ್ಲಿ ಸಿಪಿಐ ಎ.ಕೆ.ರಾಜೇಶ್ ನೇತೃತ್ವದ ಪೊಲೀಸರ ತಂಡದ ವಿಚಾರಣೆ ವೇಳೆ ನಾಗಮಣಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು,ಈ ಸಂಬಂಧ ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಸಲಿ ನಡೆದಿದ್ದೇನು
ನಾಗಮಣಿ ಮತ್ತು ಹೇಮಂತ್ ಕನಕಪುರ ಗ್ರಾಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು.ಈ ವೇಳೆ ಇಬ್ಬರಿಗೂ ಪರಿಚಯವಾಗಿ ಅನೈತಿಕ ಸಂಬಂಧ ಹೊಂದಿದ್ದರು. ಪತ್ನಿಯ ಅನೈತಿಕ ಸಂಬಂಧ ತಿಳಿದು ಶಶಿಕುಮಾರ್ ಪತ್ನಿಯನ್ನು ಕಳೆದ ಎರಡು ತಿಂಗಳ ಹಿಂದೆ ಕೆಲಸ ಬಿಡಿಸಿ ಮಳವಳ್ಳಿ ಮನೆಗೆ ಕರೆತಂದು ಮನೆಯಲ್ಲಿಯೇ ಇರುವಂತೆ ಹೇಳಿದ್ದರು ಎನ್ನಲಾಗಿದೆ.

ತಮ್ಮ ಅನೈತಿಕ ಸಂಬಂಧ ತಪ್ಪಿಹೋದ ಹಿನ್ನೆಲೆಯಲ್ಲಿ ಕೋಪಗೊಂಡ ನಾಗಮಣಿ ಪ್ರಿಯಕರ ಹೇಮಂತ್ ಜೊತೆಗೂಡಿ ಪತಿ ಶಶಿಕುಮಾರ್ ಅನ್ನು ಕೊಲೆ ಮಾಡಲು ನಿರ್ಧರಿಸಿದ್ದರು.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶಾಂತಂ ಪಾಪಂ ಕಾರ್ಯಕ್ರಮದಿಂದ ಪ್ರೇರಿತಳಾದ ನಾಗಮಣಿ ಪ್ರಿಯಕರ ಹೇಮಂತ್ ನನ್ನು ಭಾನುವಾರ ರಾತ್ರಿ ಮನೆಗೆ ಕರೆಸಿಕೊಂಡು ಮನೆಯಲ್ಲಿದ್ದ ಮಗನಿಗೆ ಮೊಬೈಲ್ ನೀಡಿ ರೂಮಿನಲ್ಲಿ ಆಟವಾಡಿಕೊಳ್ಳಲು ಹೇಳಿ ಶಶಿಕುಮಾರ್ ನನ್ನು ದಿಂಬು ಮತ್ತು ವೇಲಿನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಯಾರೋ ದುಷ್ಕರ್ಮಿಗಳು ಬಂದು ನನ್ನನ್ನು ಮತ್ತು ಮಗನನ್ನು ಕೈಕಾಲು ಕಟ್ಟಿ ರೂಮಿನಲ್ಲಿ ಕೂಡಿಹಾಕಿ ಗಂಡನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ನಾಟಕವಾಡಿದ್ದಳು

ನಮ್ಮ ನುಡಿ ಕರ್ನಾಟಕ YouTube ಚಾನಲ್ ವೀಡಿಯೋ ಗಳನ್ನು ನೋಡಲು ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ..

https://bit.ly/3DEHvvv

ನೆಚ್ಚಿನ ಸುದ್ದಿಗಳ ಓದಿಗಾಗಿ ನಮ್ಮ WhatsApp ಗ್ರೂಪ್ ಸೇರಲು 👇 ಈ ಲಿಂಕ್ ಮೇಲೆ ಸೇರಿರಿ.

https://chat.whatsapp.com/KWv6TFFjpipBRKbqUKkHKJ

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!