Tuesday, November 24, 2026

ಪ್ರಾಯೋಗಿಕ ಆವೃತ್ತಿ

ಪತ್ನಿಗೆ ವಿಚ್ಛೇದನ ನೀಡಿ ಹಾಲಿನಿಂದ ಸ್ನಾನ ಮಾಡಿದ ಪತಿ

ಪತ್ನಿಯಿಂದ ವಿಚ್ಛೇದನ ಸಿಕ್ಕಿದ್ದಕ್ಕೆ ಖುಷಿಯಿಂದ 40 ಲೀಟ‌ರ್ ಹಾಲಿನಿಂದ ಸ್ನಾನವನ್ನು ಮಾಡಿ ಪತಿಯೊಬ್ಬ ಸಂಭ್ರಮಿಸಿದಂತ ಘಟನೆ ನಡೆದಿದೆ.

ಅಸ್ಸಾಂ ರಾಜ್ಯದ ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್ ನಲ್ಲಿ ಮಾಣಿಕ್ ಅಲಿ ಎಂಬಾತನೇ ಹೀಗೆ ಸ್ನಾನ ಮಾಡಿದಂತ ಪತಿ. ಈತ ಹಾಲಿನಿಂದ ಸ್ನಾನ ಮಾಡಿದಂತಹ ವೀಡಿಯೋ ವೈರಲ್ ಆಗಿದೆ.

“>

 

ವೀಡಿಯೋದಲ್ಲಿ ನಾನು ಈಗ ಸ್ವತಂತ್ರ ಎಂಬುದಾಗಿ ಹೇಳಿಕೊಂಡಿರುವ ಮಾಣಿಕ್ ಆಲಿ, ಕಾನೂನಿನ ಮೂಲಕ ಪತ್ನಿಯಿಂದ ವಿಚ್ಚೇದನ ಪಡೆದಿದ್ದೇನೆ. ಇಂದಿನಿಂದ ನಾನು ಸ್ವತಂತ್ರ ಎಂದಿದ್ದಾನೆ. ಪತ್ನಿಯಿಂದ ವಿಚ್ಛೇದನ ಪಡೆದ ನಾನು ಶುದ್ದೀಕರಣಕ್ಕಾಗಿ 40 ಲೀಟರ್ ಹಾಲು ತಂದು ಸ್ನಾನ ಮಾಡುತ್ತಿದ್ದೇನೆ ಎಂಬುದಾಗಿ ಯೂ ಹೇಳಿಕೊಂಡಿದ್ದಾನೆ.

ಸ್ಥಳೀಯರ ಪ್ರಕಾರ, ದಂಪತಿಗಳು ಪರಸ್ಪರ ಕಾನೂನುಬದ್ಧವಾಗಿ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸುವ ಮೊದಲು ಆತನ ಪತ್ನಿ ಕನಿಷ್ಠ ಎರಡು ಬಾರಿ ಪ್ರಿಯಕರನ ಜೊತೆ ಓಡಿಹೋಗಿದ್ದರು. ಇದರಿಂದ ಬೇಸತ್ತ ಪತಿ ವಿಚ್ಚೇದನಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದ.

ವಿಚ್ಛೇದನ ಅಂತಿಮಗೊಂಡಿದೆ ಎಂದು ವಕೀಲರು ತಿಳಿಸಿದ ನಂತರ ಆತ ಸ್ವತಂತ್ರ್ಯ ಜೀವನ ಆರಂಭಿಸುತ್ತೇನೆ ಎಂದು ಹೇಳಿಕೊಂಡಿದ್ದು, ಈ ಖುಷಿಗಾಗಿ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ಹೇಳಿ ಕೊಂಡಿದ್ದಾನೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ