ನಾಗಮಂಗಲದ ತಾಲೂಕು ಆಡಳಿತ ವತಿಯಿಂದ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.
ತಾಲ್ಲೂಕು ಅಧಿಕಾರಿಗಳು ಶ್ರೀ ಸೌಮ್ಯಕೇಶವ ದೇವಾಲಯ ಆವರಣದಿಂದ ಶಾಲಾ ಮಕ್ಕಳ ಜೊತೆಗೂಡಿ ಸ್ವಾತಂತ್ರೋತ್ಸವದ ಜಾಗೃತಿ ಮೂಡಿಸುವ ತಿರಂಗ ಅಭಿಯಾನದಲ್ಲಿ ಹೆಜ್ಜೆ ಹಾಕಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹರ್ ಘರ್ ತಿರಂಗ ಜಾಥಾದೊಂದಿಗೆ ತಾಲೂಕು ಆಡಳಿತದ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಅಭಿಯಾನದಲ್ಲಿ ಮಕ್ಕಳ ಜೊತೆಗೂಡಿ ಸ್ವಾತಂತ್ರ್ಯದ ಮಹತ್ವ ಸಾರಿದರು.
ಎಲ್ಲಾ ಮಕ್ಕಳು ರಾಷ್ಟ್ರಧ್ವಜ ಹಿಡಿದು ಘೋಷಣೆ ಕೂಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.




